ಮೈಸೂರು: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾದ ಘಟನೆ ತಡರಾತ್ರಿ ಪಿರಿಯಾಪಟ್ಟಣ ತಾಲೂಕಿನ ಮಂಚದೇವನಹಳ್ಳಿ ಬಳಿ ನಡೆದಿದೆ.

ಗುತ್ತಿಗೆದಾರ ಅರುಣ್ (38)ಸಾವನ್ನಪ್ಪಿದ ವ್ಯಕ್ತಿ. ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಅರುಣ್ ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿದೆ. ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.