ನಂಜನಗೂಡು: ಸಾರಿಗೆ ಬಸ್ಸಿನ ಟೈಯರ್ ಬ್ಲಾಸ್ಟ್ ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಸಮೀಪದಲ್ಲಿ ನಡೆದಿದೆ.
ಸಾರಿಗೆ ಬಸ್ಸಿನ ಟೈಯರ್ ಬ್ಲಾಸ್ಟ್ ರಭಸಕ್ಕೆ ಬಸ್ಸಿನ ಒಳಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರ ಕಾಲು ಮುರಿತಗೊಂಡಿದೆ. ಹೆಡಿಯಾಲ ಸಮೀಪದ ಬಂಕಹಳ್ಳಿ ಗ್ರಾಮದ ಶಾಯಿದಬಾನು 35 ವರ್ಷದ ಪ್ರಯಾಣಿಕ ಮಹಿಳೆಗೆ ಗಂಭೀರ ಗಾಯ. ಬೇಗೂರಿನಿಂದ ಹೆಡಿಯಾಲ ಮಾರ್ಗವಾಗಿ ಹೆಚ್ ಡಿ ಕೋಟೆಗೆ ಸಾರಿಗೆ ಬಸ್ಸು ತೆರಳುತ್ತಿತ್ತು.

ಕೂದಲೆಳೆಯ ಅಂತರದಲ್ಲಿ ಸಾರಿಗೆ ಬಸ್ಸಿನಲ್ಲಿ ಕುಳಿತಿದ್ದ ಸಾಕಷ್ಟು ಪ್ರಯಾಣಿಕರು ಜೀವ ಬದುಕಿಸಿಕೊಂಡರು. ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದೆ. ಹೆಡಿಯಾಲ ಗ್ರಾಮದ ಗ್ರಾಪ ಮಾಜಿ ಅಧ್ಯಕ್ಷ ನೇಮತ್ ಉಲ್ಲಾಖಾನ್ ಮತ್ತು ಸ್ನೇಹಿತರಿಂದ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಸರಗೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನೇಮತ್ ಮತ್ತು ಸ್ನೇಹಿತರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ಗುಜರಿಗೆ ಹಾಕುವ ಸಾರಿಗೆ ಬಸ್ಸುಗಳನ್ನು ರಸ್ತೆಗೆ ಇಳಿಸಲಾಗಿದೆ.

ಹೆಡಿಯಾಲ ಗಡಿ ಭಾಗವಾಗಿರುವ ದೆಸೆಯಿಂದ ದಿನನಿತ್ಯ ಸರ್ಕಾರಿ ಬಸ್ಸುಗಳು ಕೆಟ್ಟು ನಿಲ್ಲುತ್ತಿವೆ. ರಾಜ್ಯ ಸರ್ಕಾರ ಉಚಿತ ಬಸ್ ಪ್ರಯಾಣ ಮಾಡಿರುವ ದೆಸೆಯಿಂದ ಅತಿ ಹೆಚ್ಚು ಮಹಿಳಾ ಪ್ರಯಾಣಿಕರೆ ಸಂಚರಿಸುತ್ತಿದ್ದಾರೆ. ಸಾರಿಗೆ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳು ಜಾಗೃತರಾಗಿ ಪ್ರಯಾಣಿಕರಿಗೆ ಅನುಕೂಲವಾಗುವ ಉತ್ತಮ ಸುಸಜ್ಜಿತ ಬಸ್ಸುಗಳನ್ನು ಕಲ್ಪಿಸಬೇಕಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಘಟನೆ ಪ್ರತ್ಯಕ್ಷ ದರ್ಶಿ ನೇಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

