ಮೈಸೂರು : ಸರಗೂರು ತಾಲೂಕಿನ ಹಾಲುಗಡ ಗಣೇಶನ ಗುಡಿ ಬಳಿ ಸೇತುವೆ ಕುಸಿತಗೊಂಡು ನಾಲೆಗೆ ಭತ್ತ ತುಂಬಿದ್ದ ಲಾರಿ ಬಿದ್ದಿರುವ ಘಟನೆ ನಡೆದಿದೆ. ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸರಗೂರು ತಾಲ್ಲೂಕಿನ ಇಟ್ನ ಗ್ರಾಮದಿಂದ ತಮಿಳುನಾಡಿಗೆ ಭತ್ತ ತುಂಬಿಕೊಂಡು ಲಾರಿ ಹೋಗುತ್ತಿತ್ತು. ಸರಗೂರು ತಾಲೂಕಿನ ಬಲದಂಡೆ ನಾಲೆ ಸೇತುವೆ ಕುಸಿತಗೊಂಡಿದೆ. ಶ್ರೀ ಚಿಕ್ಕದೇವಮ್ಮನ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ, ವಿವಿಧ ಗ್ರಾಮಗಳಿಗೆ ತೆರಳುವ ರಸ್ತೆಯಲ್ಲಿರುವ ಸೇತುವೆ ಇದಾಗಿದೆ.

ಲಾರಿ ಸಂಖ್ಯೆ ಟಿಎನ್.52, 8333 ಭತ್ತ ತುಂಬಿದ್ದ ಲಾರಿ ಇದಾಗಿದ್ದು, ತಡರಾತ್ರಿ ಘಟನೆ ನಡೆದಿದೆ. ಸೇತುವೆ ದುರಸ್ತಿ ಪಡಿಸುವಂತೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಸುತ್ತಮತ್ತಲಿನ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಸ್ಥಳೀಯರ ಮನವಿಗೆ  ಅಧಿಕಾಗಳು ಕ್ಯಾರೆ ಎನ್ನಲಿಲ್ಲ.

ಇದೀಗ ಹಳೆಯ ಸೇತುವೆ ಕುಸಿತಗೊಂಡಿದೆ. ಚಿಕ್ಕಮ್ಮ ಚಿಕ್ಕದೇವಿ ಬೆಟ್ಟ ಸೇರಿ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ಸರಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.