ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ಸ್ವಾಮಿ ಅಯ್ಯಪ್ಪ ದೇವಸ್ಥಾನದಲ್ಲಿ ಡಿ.16 ರಿಂದ ಡಿ.26 ರವರೆಗೆ 28ನೇ ವರ್ಷದ ಬ್ರಹ್ಮೋತ್ಸವ ರಾಮಾಯಣ ನಡೆಯಲಿದೆ ಎಂದು ದೇವಾಲಯದ ಗುರುಸ್ವಾಮಿಗಳಾದ ಪಿ. ದೇವರಾಜಸ್ವಾಮಿ ತಿಳಿಸಿದರು.
ನಂಜನಗೂಡಿನ ಶ್ರೀ ಸ್ವಾಮಿ ಅಯ್ಯಪ್ಪ ದೇವಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. 28ನೇ ವರ್ಷದ ಬ್ರಹ್ಮೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಕಪಿಲಾ ನದಿ ತೀರದಲ್ಲಿ ನೆಲೆಸಿರುವ ಅಯ್ಯಪ್ಪ ಸ್ವಾಮಿಗೆ 11 ದಿನದ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಡಿ.16 ರಂದು ಬೆಳಿಗ್ಗೆ ಧ್ವಜಾರೋಹಣ, ಸಂಜೆ 6 ಗಂಟೆಗೆ ನೃತ್ಯ ರೂಪಕ ಮತ್ತು ಶನಿಮಹಾತ್ಮೆ ನಾಟಕ ಪ್ರದರ್ಶನ. ಡಿ.17 ರಂದು ಸಂಜೆ 5 ಗಂಟೆಗೆ ಭಜನಾ ಕಾರ್ಯಕ್ರಮ, ಹಾಗೂ ಪಡಿಪೂಜೆ ನಡೆಯಲಿದೆ. ರಾತ್ರಿ 8 ಗಂಟೆಗೆ ದಕ್ಷಯಜ್ಞ ನಾಟಕ ಪ್ರದರ್ಶನವಾಗಲಿದೆ.
ಡಿ.18 ರಂದು ಲಗು ಸಂಗೀತ ಮತ್ತು ದಕ್ಷಯಜ್ಞ ನಾಟಕ, ಡಿ.19 ರಂದು ಭಕ್ತಿಗಾನಾಮೃತ ಹಾಗೂ ಶನಿ ಪ್ರಭಾವ ನಾಟಕ, ಡಿ.20 ರಂದು ಅನ್ನಸಂಪರ್ಪಣೆ, ನಂಜನಗೂಡಿನ ರಾಜಭೀದಿಗಳಲ್ಲಿ ಅಯ್ಯಪ್ಪ ಸ್ವಾಮಿಯ ಮೆರವಣಿಗೆ, ರಾತ್ರಿ 7 ಗಂಟೆಗೆ ಕಪಿಲಾ ನದಿಯಲ್ಲಿ ಆರಾಟ್ಟು ಹಾಗೂ ತೆಪ್ಪೋತ್ಸವ, ಮತ್ತು ಕುರುಕ್ಷೇತ್ರ ನಾಟಕ ಪ್ರದರ್ಶನ, ಡಿ. 21 ರಂದು ಸಂಜೆ 5 ಗಂಟೆಗೆ ಭಕ್ತಿಗೀತೆಗಳು ಮತ್ತು ದಕ್ಷಯಜ್ಞ ನಾಟಕ, ಡಿ.22 ರಂದು ಸಂಜೆ 5 ಗಂಟೆಗೆ ಭಕ್ತಿಗೀತೆಗಳು ಮತ್ತು ರಾಮಾಯಣ ನಾಟಕ ಪ್ರದರ್ಶನಗೊಳ್ಳಲಿದೆ.
ಡಿ.23 ರಂದು ಸಂಜೆ 5 ಗಂಟೆಗೆ ಭಕ್ತಿಗೀತೆಗಳು ರಾತ್ರಿ 8 ಗಂಟೆಗೆ ಸಂಪೂರ್ಣ ರಾಮಾಯಣ ನಾಟಕ, ಡಿ.24 ರಂದು ಪಾದಯಾತ್ರೆಗಳಿಗೆ ದೇವಾಲಯದಲ್ಲಿ ಇರುಮುಡಿ, ರಾತ್ರಿ 8ಗಂಟೆಗೆ ದಕ್ಷಯಜ್ಞ ನಾಟಕ, ಡಿ.25 ರಂದು ಬೆಳಗ್ಗೆ 5 ಗಂಟೆಯಿಂದ ಮೈಸೂರಿನ ದತ್ತ ವೆಂಕಟೇಶ್ವರಸ್ವಾಮಿ ದೇವಾಲಯದಿಂದ ನಂಜನಗೂಡಿನ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಇರುಮುಡಿ ಹೊತ್ತು ಬರುವ ಅಯ್ಯಪ್ಪ ಭಕ್ತರ ಬೃಹತ್ ಪಾದಯಾತ್ರೆ ಹಾಗೂ ಸಂಜೆ 5 ಗಂಟೆಗೆ ಭರತನಾಟ್ಯ ಹಾಗೂ ರಾತ್ರಿ 8 ಗಂಟೆಗೆ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ಹಾಗೂ ಡಿ. 26ರಂದು ಬೆಳಿಗ್ಗೆ 8 ಗಂಟೆಗೆ ಮಂಡಲಾಭಿಷೇಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.

