ಮೈಸೂರು: ಹಾವು ಕಡಿದು ಬಾಲಕ ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣ ತಾಲ್ಲೂಕು ಕಂಪಲಾಪುರದಲ್ಲಿ ನಡೆದಿದೆ.
ವೆಂಕಟೇಶ್ 14 ಮೃತ ಬಾಲಕ. ಹಸುವಿಗೆ ಹುಲ್ಲು ಹಾಕುವ ವೇಳೆ ಹಾವು ಕಚ್ಚಿದೆ. ಬಲಗೈ ಬೆರಳಿಗೆ ಹಾವು ಕಚ್ಚಿದರೂ ಮನೆಯವರಿಗೆ ಬಾಲಕ ತಿಳಿಸಲಿಲ್ಲ. ಅಂಗಡಿಯಿಂದ ಪ್ಲಾಸ್ಟರ್ ತಂದು ಬೆರಳಿಗೆ ವೆಂಕಟೇಶ್ ಸುತ್ತಿಕೊಂಡಿದ್ದಾರೆ.
ಬಳಿಕ ಅಸ್ವಸ್ಥಗೊಂಡು ಬಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ತಕ್ಷಣ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

