ನಂಜನಗೂಡು: ವೈದ್ಯ ಲೋಕವನ್ನೇ ಬೆರಗಾಗುವಂತಹ ರೂಪ ಹೊಂದಿದ ಮಗುವೊಂದು ನಂಜನಗೂಡಿನ ಹುರಾ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಜನನವಾಗಿದೆ. ಹುಟ್ಟಿದ ಮಗು ಆರೋಗ್ಯ ಇಲಾಖೆಯನ್ನು ಬೆಚ್ಚಿ ಬೀಳಿಸಿದೆ.

ವಿಚಿತ್ರವಾದ ಕಣ್ಣು ಮತ್ತು ತುಟಿ ಮೈಯೆಲ್ಲಾ ಇದ್ದಲಿನಂತೆ ಕಪ್ಪು ಬಣ್ಣ, ನೋಡುಗರನ್ನು ಬೆಚ್ಚಿಬೀಳುವಂತಹ ಮಗು ಹುಟ್ಟುವ ಮೂಲಕ ಆರೋಗ್ಯ ಇಲಾಖೆಯನ್ನು ಹುಬ್ಬೇರುವಂತೆ ಮಾಡಿದೆ. ಹುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿರುವ ಗ್ರಾಮ ಒಂದರ ದಂಪತಿಗೆ ಇಂತಹ ರೂಪ ಹೊಂದಿರುವ ಮಗು ಹುಟ್ಟಿದೆ.

ಮಗುವಿನ ಆಕಾರ ಮತ್ತು ರೂಪಕ್ಕೆ ಗ್ರಾಮಸ್ಥರು ಮತ್ತು ದಂಪತಿ ಕುಟುಂಬಸ್ಥರು ಶಾಕ್ ಆಗಿದ್ದಾರೆ. ಕೆಲವೇ ಗಂಟೆಗಳ ಹಿಂದೆ ಹುಟ್ಟಿದ ಮಗುವನ್ನು ಉಳಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ. ವಿಚಿತ್ರ ರೂಪದ ಮಗುವನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಏಳು ದಿನಗಳ ಕಾಲ ತುರ್ತು ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಿದ್ದಾರೆ. ಕಳೆದ ವರ್ಷಗಳ ಇದೇ ದಂಪತಿ ಇಂತದ್ದೇ ರೂಪ ಹೊಂದಿದ ಮಗುವಿಗೆ ಜನ್ಮ ನೀಡಿತ್ತು. ನಾಲ್ಕೈದು ದಿನಗಳ ಸಾವನ್ನಪ್ಪಿತ್ತು.
ಮತ್ತೆ ಈ ಬಾರಿಯೂ ಕೂಡ ಇದೇ ರೀತಿ ಇಡೀ ಕುಟುಂಬವನ್ನು ಬೆಚ್ಚಿ ಬೀಳಿಸುವಂತಹ ವಿಚಿತ್ರ ಮಗು ಈ ದಂಪತಿಗೆ ಹುಟ್ಟಿದೆ.

ಈ ಹಿಂದೆ ನಡೆದ ಪ್ರಕರಣದ ನಂತರ ಆರೋಗ್ಯ ಇಲಾಖೆ ನೀಡಿದ್ದ ಸಲಹೆ ಸೂಚನೆಗಳನ್ನ ದಂಪತಿ ಪಾಲಿಸಿಲ್ಲ ಎಂದು ಹೇಳಲಾಗಿದೆ. ಮಗುವನ್ನ ಉಳಿಸಿಕೊಳ್ಳಲು ಚೆಲುವಾಂಬಾ ಆಸ್ಪತ್ರೆಯ ತುರ್ತು ಘಟಕದಲ್ಲಿ ಹರಸಾಹಸ ನಡೆಸಲಾಗುತ್ತಿದೆ. ವಿಸ್ಮಯವಾದ ಮಗು ಹುಟ್ಟುವ ಮೂಲಕ ವೈದ್ಯಲೋಕಕ್ಕೆ ಇದು ಸವಾಲು ಎನ್ನುವಂತಾಗಿದೆ.