ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವ ನಡೆಯುತ್ತಿದ್ದು, ವಿವಿಧ ಬಗೆಯ ಹೂವುಗಳಿಂದ ದೇವಾಲಯ ಕಂಗೊಳಿಸುತ್ತಿದೆ. ಗರ್ಭಗುಡಿಯಲ್ಲಿ ತಾಯಿ ಚಾಮುಂಡೇಶ್ವರಿ ಕಂಗೊಳಿಸುತ್ತಿದೆ.

ಬೆಳ್ಳಂ ಬೆಳ್ಳಿಗೆಯಿಂದ ತಾಯಿಗೆ ವಿವಿಧ ಅಭಿಷೇಕ ಮಾಡಲಾಯಿತು. ತೆಂಗಿನ ಗರಿ, ಬಾಳೆ ದಿಂಡು, ಸೇವಂತಿಗೆ ಹೂವುಗಳಿಂದ ದೇವಾಲಯ ಅಲಂಕಾರಗೊಂಡಿದೆ. ಮುಂಜಾನೆಯಿಂದ ದೇವಿಯ ದರ್ಶನಕ್ಕೆ ಭಕ್ತಾಧಿಗಳು ಸರತಿ ಸಾಲಿನಲ್ಲಿ ಬರುತ್ತಿದ್ದಾರೆ.