ಮೈಸೂರು : ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ಗದ್ದಿಗೆ ಮುಖ್ಯ ರಸ್ತೆಯ ಮಾರೇಗೌಡನಹಳ್ಳಿ ಗೇಟ್ ಸಮೀಪ ನಡೆದಿದೆ.

ಹೆಚ್ ಡಿ ಕೋಟೆ ತಾಲೂಕಿನ ಕೆ.ಬೆಳ್ತೂರು ಗ್ರಾಮದ ತಿಮ್ಮನಾಯಕ ಪುತ್ರ ಸತೀಶ್ (27) ಮೃತ‌ಪಟ್ಟ ವ್ಯಕ್ತಿ. ಮೃತ ಸತೀಶ್ ಅಕ್ಕನ ಮಗ ಶಿವು (13) ಗಂಭೀರ ಗಾಯಗೊಂಡಿದ್ದು, ಬೈಕ್ ನಲ್ಲಿ ಅಕ್ಕನ ಮಗನ ಜೊತೆ ಮೈಸೂರಿನಿಂದ ಸ್ವಗ್ರಾಮಕ್ಕೆ ತೆರಳುವಾಗ ಅವಘಡ ಸಂಭವಿಸಿದೆ.

ರೋಡ್ ರೋಲರ್ ಹೊತ್ತು ಗದ್ದಿಗೆ ಕಡೆಯಿಂದ ಲಾರಿ ಬರುತ್ತಿದ್ದ ವೇಳೆ ತಿರುವಿನಲ್ಲಿ ಬಂದ ಲಾರಿ ಏಕಾಏಕಿ ಹರಿದು ಸಾವನ್ನಪ್ಪಿದ್ದಾರೆ. ಚಾಲಕ ಜಾವೀದ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಸ್ತೆಯಲ್ಲೇ ಶವ ಇಟ್ಟು ಮೃತನ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು- ಗದ್ದಿಗೆ ಮುಖ್ಯರಸ್ತೆ ತಡೆದು ಒಂದು ಗಂಟೆಗೂ ಹೆಚ್ಚು ಕಾಲ ಸಂಬಂಧಿಕರು ಆಕ್ರೋಶ‌ ಹೊರಹಾಕಿದ್ದಾರೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಡಿವೈಎಸ್ಪಿಗಳಾದ ರಘು, ಕರೀಂ ರಾವತ್ ಸೇರಿ ಪೊಲೀಸರು ಭೇಟಿ ನೀಡಿದ್ದಾರೆ.