ನಂಜನಗೂಡು: ಸಾರ್ವಜನಿಕ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಾ ಅಪಾಯಕಾರಿ ಸ್ಟಂಟ್ ಮಾಡಿ ವಾಹನ ಸವಾರರಿಗೆ ತೊಂದರೆ ಭಯವುಂಟು ಮಾಡುತ್ತಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ ಯುವಕನನ್ನ ನಂಜನಗೂಡು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ಚಾಮಲಾಪುರ ಬೀದಿ ನಿವಾಸಿ ಸೈಯದ್ ನಾವಾಜ್(21) ಬಂಧಿತ ಯುವಕ. ಮೈಸೂರು ಚಾಮರಾಜನಗರ ಬೈಪಾಸ್ ಮುಖ್ಯ ರಸ್ತೆಯಲ್ಲಿ ವೀಲಿಂಗ್ ಮಾಡಿ ಪ್ರಚೋದನೆ ಮಾಡುವಂತೆ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ. ಗುಪ್ತಮಾಹಿತಿ ಪೊಲೀಸ್ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ತಿಮ್ಮಯ್ಯ ರವರು ಪರಿಶೀಲನೆ ಮಾಡುವಾಗ ವಿಡಿಯೋ ಕಂಡು ಬಂದಿದೆ.

ಸಾರ್ವಜನಜಕರಿಗೆ ಭಯಪಡುವಂತೆ ಹಾಗೂ ಪ್ರಚೋದನೆ ಮಾಡುವಂತಹ ಸ್ಟಂಟ್ ಮಾಡಿ ವಿಡಿಯೋ ಅಪ್ ಲೋಡ್ ಮಾಡಿದ್ದ ಸೈಯದ್ ನಾವಾಜ್ ನನ್ನು ಬಂಧಿಸಿ ಕಂಬಿ ಎಣಿಸಲು ಕಳಿಸಿದ್ದಾರೆ. ಅಲರ್ಟ್ ಆಗಿ ಖಡಕ್ ನಿರ್ಧಾರ ಕೈಗೊಂಡ ಪೊಲೀಸ್ ತಿಮ್ಮಯ್ಯ ಕಾರ್ಯವೈಕರಿಗೆ ಹ್ಯಾಟ್ಸಾಫ್ ಎನ್ನುತ್ತಾರೆ ನಂಜನಗೂಡಿನ ಜನತೆ.