ಮೈಸೂರು : ಬೈಕ್, ಕಾರು ಭೀಕರ ಅಪಘಾತ, ತಾಯಿ ಮಗ ದುರಂತ ಸಾವು ಪ್ರಕರಣದಲ್ಲಿ ಬನ್ನೂರು ಸೇತುವೆಯಿಂದ ನೂರು ಮೀಟರ್ ದೂರದಲ್ಲಿ ತಾಯಿ ಶವ ಪತ್ತೆಯಾಗಿದೆ.
ನಿನ್ನೆ ರಾತ್ರಿ ಬೈಕ್ನಲ್ಲಿ ತಾಯಿ ಮಗ ತೆರಳುತ್ತಿದ್ದ ಅಪಘಾತ ಆಗಿತ್ತು. ಬೈಕ್ ಸವಾರ ಸ್ಥಳದಲ್ಲೇ ಸಾವು, ಹಿಂಬದಿಯಲ್ಲಿ ಕುಳಿತಿದ್ದ ತಾಯಿ ನದಿಪಾಲು ಆಗಿದ್ದರು. ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಬನ್ನೂರು ಸೇತುವೆ ಮೇಲೆ ಘಟನೆ ನಡೆದಿತ್ತು.
ತಾಯಿ ಪಾರ್ವತಿ (48)ನಾಪತ್ತೆ ಆಗಿದ್ದರು. ಮಗ ಶಂಕರ್ (21)ಸ್ಥಳದಲ್ಲೇ ಸಾವನ್ನಪ್ಪಿದ್ದ. ಬೆಳಿಗ್ಗೆಯಿಂದ ಅಗ್ನಶಾಮಕ ಸಿಬ್ಬಂದಿ ಶವ ಹುಡುಕುವ ಕೆಲಸ ಮಾಡಿದ್ದರು. ಮದ್ಯಾಹ್ನ 1 ಗಂಟೆ ಸುಮಾರಿಗೆ ಶವ ಪತ್ತೆಯಾಗಿದೆ. ಮೃತರು ಮೈಸೂರಿನ ಬಿಎಂಶ್ರೀ ನಗರದ ನಿವಾಸಿಗಳು ಎಂದು ತಿಳಿದು ಬಂದಿದೆ. ಮನೆ ದೇವರಿಗೆ ಹೋಗಿ ವಾಪಸ್ ಬರುವ ವೇಳೆ ಅಪಘಾತ ಸಂಭವಿಸಿದೆ.

