ನಂಜನಗೂಡು: ಪ್ರೀತಿಸಿ ಮದುವೆ ಆಗುವಂತೆ ಯುವಕ ನೀಡಿದ ಕಿರುಕುಳಕ್ಕೆ ಅಪ್ರಾಪ್ತೆ ಆತ್ಮಹತ್ಯೆಗೆ ಶರಣಾದ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ಇಬ್ಬರ ನಡುವೆ ಲವ್ವಿ ಡವ್ವಿ ಇರುವ ವಿಚಾರ ಬೆಳಕಿಗೆ ಬಂದಿದೆ.

ಈ ಬಗ್ಗೆ ಆರೋಪ ಹೊತ್ತ ಯುವಕ ಅಪ್ರಾಪ್ತೆಯ ಜೊತೆ ಇದ್ದ ಪ್ರೀತಿಯ ಬಗ್ಗೆ ಫೋಟೋ ಹಾಗೂ ಇಬ್ಬರ ನಡುವಿನ ನಡೆದ ಆಡಿಯೋ ಸಂಭಾಷಣೆ ಬಿಡುಗಡೆ ಮಾಡಿದ್ದಾನೆ. ಆದಿತ್ಯ ಎಂಬ ಯುವಕನ ಮೇಲೆ ಕಿರುಕುಳದ ಆರೋಪ ಬಂದಿತ್ತು.

ನಂಜನಗೂಡಿನ ನೀಲಕಂಠನಗರ ನಿವಾಸಿ 17 ವರ್ಷದ ಅಪ್ರಾಪ್ತೆ ಆತ್ಮಹತ್ಯೆಗೆ ಯುವಕ ನೀಡಿದ ಕಿರುಕುಳ ಎಂಬ ಆರೋಪ ಮಾಡಲಾಗಿತ್ತು. ಈ ಬಗ್ಗೆ ಅಪ್ರಾಪ್ತೆ ತಂದೆ ಗುರುಮೂರ್ತಿ ರವರು ಯುವಕ ಆದಿತ್ಯ ಮೇಲೆ ಕಿರುಕುಳ ಆರೋಪ ಹೊರೆಸಿ ಪ್ರಕರಣ ದಾಖಲಿಸಿದ್ರು.

ಇದೀಗ ಆದಿತ್ಯ ಇಬ್ಬರ ನಡುವಿನ ಪ್ರೀತಿ ಇರುವುದನ್ನ ಸ್ಪಷ್ಟಪಡಿಸಿದ್ದು ಫೋಟೋಗಳನ್ನ, ಆಡಿಯೋ ಬಿಡುಗಡೆ ಮಾಡಿದ್ದಾನೆ. ಅಪ್ರಾಪ್ತೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಆದಿತ್ಯ ತಂದೆ ಕಿರುಕುಳದಿಂದಲೇ ಸಾವನ್ನಪ್ಪಿರಬಹುದೆಂದು ಶಂಕಿಸಿ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ವಿಡಿಯೋ ಮಾಡಿದ್ದಾನೆ.