2026ರ ಮಾರ್ಚ್ 22 ರಂದು ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸಂಪೂರ್ಣ ಭಗವದ್ಗೀತೆ ಪಾರಾಯಣ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ದೆಹಲಿಯ ಭಾರತ ಮಂಟಪದಲ್ಲಿಯೂ ಕಾರ್ಯಕ್ರಮ ನಡೆಯಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಶ್ರೀಗಳು ಆಹ್ವಾನ ನೀಡಿದ್ದಾರೆ. ಭಗವದ್ಗೀತೆಯನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿ ಒಪ್ಪಿಸಿದ ಸುಮಾರು 948 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಶ್ರೀಗಳಿಂದ ಚಿನ್ನದ ಪದಕ ಹಾಗೂ ಬಹುಮಾನಗಳನ್ನು ವಿತರಿಸುತ್ತಾರೆ.

ಗಣಪತಿ ಸಚ್ಚಿದಾನಂದ ಆಶ್ರಮದ ಮಂಟಪದಲ್ಲಿ ಭಗವದ್ಗೀತಾ ಪಾರಾಯಣ ಮೊಳಗಿದೆ. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 5000ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಗೀತೆಯ ಸಂಪೂರ್ಣ 700 ಶ್ಲೋಕಗಳನ್ನು ಪಠಣ 6 ವರ್ಷದಿಂದ ಮಕ್ಕಳಿಂದ 75 ವರ್ಷದವರೆಗಿನ ಭಕ್ತರು ಈ ಪಾರಾಯಣದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ.

