ಗುಂಡ್ಲುಪೇಟೆ : ಆಹಾರವನ್ನರಸಿ ಕಾಡಿನಿಂದ ನಾಡಿಗೆ ಬಂದಿದ್ದ ಕರಡಿಯನ್ನ ಕಂಡ ನಾಯಿಗಳು ಬೊಗಳುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ದೃಶ್ಯ ನೋಡಿದ   ಗ್ರಾಮಸ್ತರು ಭಯಭೀತರಾಗಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ  ರಾತ್ರಿ ವೇಳೆ ಕರಡಿಯೊಂದು ಪ್ರತ್ಯಕ್ಷವಾಗಿದೆ, ಇತ್ತೀಚಿಗೆ ವನ್ಯಪ್ರಾಣಿಗಳು ಮಾನವ ಆವಾಸ ಸ್ಥಾನಕ್ಕೆ ಲಗ್ಗೆಯಿಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಓಂಕಾರ್ ಅರಣ್ಯ ವಲಯಕ್ಕೆ ಸೇರಿದ ಬರಗಿ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಕರಡಿಯಿಂದ ರಾತ್ರಿ ವೇಳೆ ಹೊರಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ ಅಂತ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು  ಅರಣ್ಯ ಇಲಾಖೆ ಕಾಡಂಚಿನ ಪ್ರದೇಶ ಜನರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.