ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ೭೫ ನೇ ಹುಟ್ಟು ಹಬ್ಬ ಅಂಗವಾಗಿ ಬಿಜೆಪಿ ಯುವ ಮೋರ್ಚಾ, ಅಖಿಲಾ ಭಾರತ್ ತೇರ ಪಂತ್ ಯುವಕ್ ಪರೀಷತ್, ಹಾಗೂ ಇನರ್ವಿಲ್ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ನಂಜನಗೂಡು ನಗರದ ಅರ್ ಪಿ ರಸ್ತೆಯಲ್ಲಿರುವ ಶ್ರೀ ಜೈನ ಪರಿಷತ್ ತೇರಾ ಪಂತ್ ಸಭಾಂಗಣದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದ್ದು, ನೂರಾರು ಸಂಖ್ಯೆಯಲ್ಲಿ ರಕ್ತದಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಸಿದ್ದರಾಜು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ಚಾಣಾಕ್ಷತನದಿಂದ ಭಾರತ ಇಂದು ಆರ್ಥಿಕ ಪರಿಸ್ಥಿತಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ರಧಾನಿಯವರಿಂದ ಶತ್ರು ರಾಷ್ಟ್ರಗಳು ನಮ್ಮ ಭಾರತದ ಹತ್ತಿರ ಸುಳಿಯಲು ಹೆದರುವ ಪರಿಸ್ಥಿತಿ ಇದೆ.
ಸ್ವಚ್ಛ ಭಾರತ ಮೇಕ್ ಇನ್ ಇಂಡಿಯಾ ಇದು ಅನೇಕ ಯೋಜನೆಗಳಲ್ಲಿ ಪ್ರಧಾನಿಯವರ ಕನಸಿನ ಕೂಸಾಗಿದೆ. ಪ್ರಧಾನಿಯವರು ಇಂದು ವಿಶ್ವದ ವಿಶ್ವಗುರು ಸ್ಥಾನವನ್ನು ಅಲಂಕರಿಸಿದ್ದಾರೆ ಎಂದು ಬಣ್ಣಿಸಿದರು.

