ಮೈಸೂರು: ನಂಜನಗೂಡು ನಂಜುಂಡೇಶ್ವರ ಸ್ವಾಮಿಯ ಜಾತ್ರೆ ಹಿನ್ನಲೆ ನಾಡಿನ ಜನತೆಗೆ ಕ್ಷೇತ್ರದ ಜನತೆಗೆ ಶಾಸಕ ದರ್ಶನ್ ಧ್ರುವ ನಾರಾಯಣ್ ಶುಭ ಕೋರಿದರು.
ಎಲ್ಲರಿಗೂ ನಂಜುಂಡೇಶ್ವರ ಒಳಿತು ಮಾಡಲಿ. ಇಂತ ಪುಣ್ಯ ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶ ನನಗೆ ಸಿಕ್ಕಿದೆ. ಈಗಾಗಲೇ ರಥೋತ್ಸವ ಆಗಿದೆ. ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.
ಬರುವಂತ ಭಕ್ತರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಎರಡು ಬಾರಿ ಡಿಸಿ, ಎಡಿಸಿ, ಜೊತೆ ಸಭೆ ಮಾಡಿದ್ದೇನೆ.
ಅಧಿಕಾರಿಗಳು ಅಚ್ಚುಕಟ್ಟಾಗಿ ರಥೋತ್ಸವ ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಎಲ್ಲರಿಗೂ ನಾನು ಶುಭ ಕೋರುತ್ತೇನೆ ಎಂದು ನಂಜನಗೂಡಿನಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿಕೆ ನೀಡಿದ್ದಾರೆ.

