ಮೈಸೂರು : ಶೂ ಒಳಗೆ ನಾಗರಹಾವಿನ ಮರಿ ಅಡಗಿದ್ದು,  ಉರಗ ಸಂರಕ್ಷ ಸ್ನೇಕ್ ಶಾಮ್ ರಿಂದ ರಕ್ಷಣೆ ಮಾಡಲಾಯಿತು. ಶೂ ಒಳಗೆ ನಾಗರಹಾವು ಕಂಡು  ಮನೆಯವರು ಬೆಚ್ಚಿ ಬಿದ್ದಿದ್ದಾರೆ. ಮೈಸೂರಿನ ಹೂಟಗಳ್ಳಿಯಲ್ಲಿ ಘಟನೆ ನಡೆದಿದೆ.

ಹಾವು ಕಂಡೊಡನೆ ಉರಗ ಸಂರಕ್ಷಕ ಸ್ನೇಕ್ ಶಾಮ್ ಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಿಮಿಸಿದ ಸ್ನೇಕ್ ಶಾಮ್ ರಿಂದ ನಾಗರಹಾವಿನ ಮರಿ ರಕ್ಷಣೆ ಮಾಡಲಾಯಿತು. ರಕ್ಷಣೆ ಮಾಡಿದ ಹಾವನ್ನು ಸುರಕ್ಷಿತ ಪ್ರದೇಶದಲ್ಲಿ  ಸ್ನೇಕ್ ಶಾಮ್ ಬಿಟ್ಟಿದ್ದಾರೆ.