ನಂಜನಗೂಡು: ಪಟ್ಟಣದ ನಗರಸಭಾ ಕಚೇರಿ ಆವರಣದಲ್ಲಿ ನಂಜನಗೂಡು ನಗರಸಭಾ ವ್ಯಾಪ್ತಿಯ ಆಸ್ತಿ ಮಾಲೀಕರುಗಳಿಗೆ ಬಿ ಖಾತಾ ಪತ್ರಗಳನ್ನು ಶಾಸಕ ದರ್ಶನ್ ಧ್ರುವನಾರಾಯಣ್ ವಿತರಿಸಿದರು.
ವೈದ್ಯಕೀಯ ಸಹಾಯ ಧನ ಚೆಕ್, ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಚೆಕ್, ವಾಸದ ಮನೆಗಳು ಬಿದ್ದಿರುವುದಕ್ಕೆ ಪರಿಹಾರ ಚೆಕ್ ವಿತರಣೆ ಮಾಡಿದ ನಂತರ ಮಾತನಾಡಿದ ಶಾಸಕರು, ನಂಜನಗೂಡು ನಗರಸಭಾ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳ ನಿವೇಶನ ಮತ್ತು ಕಟ್ಟಡಗಳಿಗೆ ಬಿ-ಖಾತೆ ನೀಡುವ ಮೂಲಕ ಅವುಗಳನ್ನು ನಿಯಮಬದ್ಧಗೊಳಿಸುವ ಉದ್ದೇಶದಿಂದ ಈ ಅಭಿಯಾನವು ಮೂರು ತಿಂಗಳ ಕಾಲ ನಡೆಯಲಿದ್ದು, ನಿವೇಶನದಾರರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಉಪಾಧ್ಯಕ್ಷೆ ರಿಯಾನಾ ಬಾನು, ನಗರಸಭೆ ಪೌರಯುಕ್ತ ವಿಜಯ್, ನಗರಸಭಾ ಸದಸ್ಯರಾದ ಗಾಯತ್ರಿ ಮೋಹನ್, ಯೋಗೀಶ್, ಶ್ವೇತ ಲಕ್ಷ್ಮಿ, ಗಂಗಾಧರ್, ಮಹೇಶ್, ಮೀನಾಕ್ಷಿ, ಸಿದ್ದಿಕ್, ಯೋಗೀಶ್, ಖಾಲಿದ್, ಮಹದೇವಸ್ವಾಮಿ, ಸಿದ್ದರಾಜು, ಬಸವರಾಜ್, ಸೌಭಾಗ್ಯ, ರಮೇಶ್, ರವಿ, ದೀಪು ಸೇರಿದಂತೆ ಹಲವರು ಭಾಗವಹಿಸಿದ್ದರು.

