ನಂಜನಗೂಡು: ಕೇಂದ್ರ ರೈಲ್ವೆ ವಲಯ ಮೈಸೂರು ಚಾಮರಾಜನಗರ ಮಾರ್ಗವಾಗಿ ಕೋಣನೂರು ಗ್ರಾಮದ ಮೂಲಕ ಹಾದು ಹೋಗಿರುವ ರೈಲ್ವೆ ಗೇಟ್ ಗಳಲ್ಲಿ ಆಟೋಮೆಟಿಕ್ ಸಿಗ್ನಲ್ ಇಂಟರ್ಲಾಕ್ ದೀಪಗಳನ್ನು ಅಳವಡಿಸಿಸುವಂತೆ ರಾಜ್ಯ ತೆಂಗು ಬೆಳೆಗಾರರ ಸಂಘದ ರೈತರು ಒತ್ತಾಯಿಸಿದರು.
ಕೋಣನೂರು ಗ್ರಾಮದಲ್ಲಿರುವ ಎರಡು ರೈಲ್ವೆ ಗೇಟ್ಗಳಲ್ಲಿ ರೈಲು ಬರುವುದಕ್ಕಿಂತ 45 ನಿಮಿಷಕ್ಕೂ ಅಥವಾ ಒಂದು ಗಂಟೆ ಮುಂಚಿತವಾಗಿ ಗೇಟ್ಗಳನ್ನು ಮುಚ್ಚುತ್ತಿರುವುದರಿಂದ ಗ್ರಾಮಸ್ಥರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಾರ್ವಜನಿಕರಿಗೆ ಧನ ಕರುಗಳಿಗೆ ಕೂಲಿ ಕಾರ್ಮಿಕರಿಗೆ ಮತ್ತು ಗರ್ಭಿಣಿ ಬಾಣಂತಿಯರಿಗೆ ತುರ್ತು ವಾಹನಗಳು ಮತ್ತು ಶಾಲಾ ವಾಹನಗಳು ಸಂಚರಿಸಲು ಅರಸ ಪಡಬೇಕಾಗಿದೆ.
ಅಲ್ಲದೆ ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸರಬರಾಜು ಮಾಡಲು ಹಾಗೂ ಶವಸಂಸ್ಕಾರಕ್ಕೂ ತೊಂದರೆಯಾಗುತ್ತಿದೆ ಎಂದು ರಾಜ್ಯ ತೆಂಗು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕೋಣನೂರು ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ರೈಲ್ವೆ ಇಲಾಖೆ ರೈಲ್ವೆ ಗೇಟ್ ಗಳಿಗೆ ಆಟೋಮೆಟಿಕ್ ಸಿಗ್ನಲ್ ಲೈಟ್ ಮತ್ತು ಇಂಟರ್ಲಾಕ್ ಅಳವಡಿಸಬೇಕು ಇಲ್ಲದಿದ್ದರೆ ರೈಲ್ವೆ ಮೇಲ್ಸೇತುವೆ ಅಥವಾ ಕೆಳ ಸೇತುವೆ ಏನನ್ನಾದರೂ ನಿರ್ಮಾಣ ಮಾಡಿಕೊಡಬೇಕು ಎಂದು ಇಲ್ಲವಾದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕೋಣನೂರು ವಿಶ್ವನಾಥ್, ಗ್ರಾಪಂ ಅಧ್ಯಕ್ಷ ವಸಂತ ಕುಮಾರ್, ಸಂಘದ ಉಪಾಧ್ಯಕ್ಷರಾದ ಜಾದು, ಗುರುಸ್ವಾಮಿ, ಪದಾಧಿಕಾರಿಗಳಾದ ಬಸವರಾಜು, ಪ್ರಭುಸ್ವಾಮಿ, ಶಿವಕುಮಾರ್, ಸಿದ್ದೇಶ್ ಸೇರಿದಂತೆ ಹಲವರು ಕೇಂದ್ರ ರೈಲ್ವೆ ಸಚಿವರಾದ ವಿ. ಸೋಮಣ್ಣ ರವರಿಗೆ ಮನವಿ ಸಲ್ಲಿಸಿದರು.

