ಮೈಸೂರು: ನಿಷೇಧಿತ ಮಾದಕ ವಸ್ತುಗಳನ್ನ ಮಾರಾಟ ಮಾಡಲು ಯತ್ನಿಸಿದ ತೃತೀಯಲಿಂಗಿ ಪೊಲೀಸರ ಅತಿಥಿಯಾಗಿದ್ದಾರೆ. ಬಂಧಿತರಿಂದ 4 ಗ್ರಾಂ 10 ಮಿಲೀ MDMA ವಶಪಡಿಸಿಕೊಳ್ಳಲಾಗಿದೆ.
ಶಾಂತಿನಗರದ ಸೈಯದ್ ನೂರುಲ್ಲಾ@ಇಮ್ರಾನ್@ಲಕ್ಷ್ಮಿ ಬಂಧಿತ ತೃತೀಯ ಲಿಂಗಿ. ನಿಷೇಧಿತ ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೋಲೀಸರು ದಾಳಿ ನಡೆಸಿದಾಗ ತೃತೀಯಲಿಂಗಿ ಡ್ರಗ್ಸ್ ಸಮೇತ ಸಿಕ್ಕಿಬಿದ್ದಿದ್ದಾರೆ. ಘಟನೆ ಸಂಭಂಧ ಸಿಸಿಬಿ ಠಾಣೆ ಪೊಲೀಸರು ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

