ಮೈಸೂರು: ಉಪ ಲೋಕಾಯುಕ್ತರ ಮದ್ದೂರು ಭೇಟಿ ಎಫೆಕ್ಟ್ ಓರ್ವ ಗ್ರಾಪಂ ಅಧಿಕಾರಿ ತಲೆದಂಡವಾಗಿದೆ. ಕೋಟ್ಯಾಂತರ ಹಣ ದುರುಪಯೋಗ ಹಾಗೂ ಕರ್ತವ್ಯ ಲೋಪ ಆರೋಪದ ಹಿನ್ನಲೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಆತಗೂರು ಗ್ರಾಮ ಪಂಚಾಯ್ತಿ ಪಿಡಿಓ ಎ.ಬಿ.ಶಶಿಧರ್ ಅಮಾನತ್ತಾಗಿದ್ದಾರೆ.
15ನೇ ಹಣಕಾಸು ಯೋಜನೆಯ ಅನುದಾನ ದುರ್ಬಳಕೆ ಆರೋಪ ಕೇಳಿಬಂದಿದ್ದು, ಎ.ಬಿ.ಶಶಿಧರ್ ಮೇಲಿದೆ. ಜಿಪಂ ಸಿಇಓ ಕೆ.ಆರ್.ನಂದಿನಿ ಆದೇಶ ಹೊರಡಿಸಿದ್ದಾರೆ. ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತ್ತು ಮಾಡಲಾಗಿದೆ. ಪಿಡಿಓ ಶಶಿಧರ್ ಅಕ್ರಮಗಳ ಸಂಬಂಧ ಬಗ್ಗೆ ತಾಲೂಕು ಪಂಚಾಯ್ತಿ ಇಓ ತನಿಖಾ ವರದಿ ಸಲ್ಲಿಸಿದ್ದರು.
ಶಶಿಧರ್ ಅಮಾನತ್ತು ಇದೇ ಮೊದಲೇನಲ್ಲ.
ಈ ಹಿಂದೆ ಹಲಗೂರು ಪಿಡಿಓ ಆಗಿದ್ದಾಗಲೂ ಹಣ ದುರುಪಯೋಗ ಕರ್ತವ್ಯಲೋಪ ಆರೋಪದಡಿ ಅಮಾನತ್ತಾಗಿದ್ದರು.ಸರ್ಕಾರಿ ಅ್ಇಕಾರಿಯಾಗಿದ್ದರೂ ನಿಯಮಗಳನ್ನ ಉಲ್ಲಂಘಿಸಿ
ರೀಲ್ಸ್ ಗಳಲ್ಲಿ ಸ್ಟಾರ್ ಆಗಿಯೂ ಮಿಂಚಿದ್ದರು. ಸರ್ಕಾರಿ ಅಧಿಕಾರಿ.ಖಾಸಗಿ ಬೌನ್ಸರ್ಸ್, ಹೊಸ ವಾಹನ ಖರೀದಿ, ಶಾರ್ಟ್ ಮೂವಿ, ಲಾಂಗ್, ಸಿಗರೇಟ್ ಹಿಡಿದು ರೀಲ್ಸ್ ಗಳನ್ನ ಮಾಡಿ ಹವಾ ಕ್ರಿಯೇಟ್ ಮಾಡಿದ್ದರು. ಸರ್ಕಾರಿ ಅಧಿಕಾರಿ ಎಂಬುದನ್ನು ಮರೆತು ಕಾನೂನುಬಾಹಿರವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಮಿಂಚುತ್ತಿದ್ದ ಪಿಡಿಓ ಶಶಿಧರ್ ಸಸ್ಪೆಂಡ್ ಆಗಿದ್ದಾರೆ.

