ಮೈಸೂರು: ಸರಗೂರಿನಲ್ಲಿ ಇಂದು ಬೆಳಗಿನ ಜಾವ 4 ಗಂಟೆಯಲ್ಲಿ ಹುಲಿ ಸೆರೆಯಾಗಿದೆ. ದೇವಲಾಪುರ ಗ್ರಾಮದ ಅಳಗಂಚಿ ಅರಣ್ಯದಂಚಿನಲ್ಲಿ ಸೆರೆ ಹಿಡಿಯಲಾಗಿದೆ.
ಹಂಚೀಪುರ, ಸಾಗರೆ, ದೇವಲಾಪುರ ಗ್ರಾಮಗಳ ಜಮೀನಿನಲ್ಲಿ ಕಾಣಿಸುತ್ತಿದ್ದ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು. ಹುಲಿ ಸೆರೆಯಿಂದ ನಿಟ್ಟುಸಿರುಬಿಟ್ಟ ಜನ ಈವರೆಗೂ ಸುಮಾರು 16 ಹುಲಿಗಳನ್ನ ಸೆರೆ ಹಿಡಿಯಲಾಗಿದೆ.

