ಮೈಸೂರು: ಮೈಶುಗರ್ ಕಾರ್ಖಾನೆಯಲ್ಲಿ ಮತ್ತೊಂದು ಅವಾಂತರ ಸೃಷ್ಟಿಯಾಗಿದೆ. ನೌಕರರರಿಗೆ ವೇತನ ಕೊಡಲು ಮೈಶುಗರ್ ಕಾರ್ಖಾನೆಯಲ್ಲಿ ದುಡ್ಡಿಲ್ಲ. ನೌಕರರಿಗೆ ವೇತನ ಪಾವತಿಸದೆ ಲಕ್ಷಗಟ್ಟಲೆ ಹಣವನ್ನು ಆಡಳಿತ ಮಂಡಳಿ ಬಾಕಿ ಉಳಿಸಿಕೊಂಡಿದೆ.

ಸುರಕ್ಷ ಸೆಕ್ಯೂರಿಟಿ ಸರ್ವಿಸಸ್ ಹಾಸನ ಮೂಲಕ ಹೊರಗುತ್ತಿಗೆ ನೌಕರರಾಗಿ  46 ನೌಕರರು ಕೆಲಸ ನಿರ್ವಹಿಸಿದ್ದರು. ಕಾರ್ಖಾನೆಯ ಸಾಮಾಗ್ರಿ ನಿರ್ವಾಹಕ ಹುದ್ದೆ ಸೇರಿ ಬೇರೆ ಬೇರೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.  2018-19ನೇ ಸಾಲಿನ 10 ತಿಂಗಳ ವೇತನವನ್ನು  ಮೈಶುಗರ್ ಕಾರ್ಖಾನೆ ಬಾಕಿ ಉಳಿಸಿಕೊಂಡಿದೆ.

10 ತಿಂಗಳ ವೇತನವನ್ನು 7 ವರ್ಷಗಳು ಕಳೆದರು ನೀಡಲಿಲ್ಲ. ಸುಮಾರು 38 ಲಕ್ಷಕ್ಕೂ ಹೆಚ್ಚು ಬಾಕಿಯಿದೆ. ಮಾಜಿ ಹಾಗೂ ಹಾಲಿ ಸಂಸದರು, ಶಾಸಕರು, ಉಸ್ತುವಾರಿ ಸಚಿವ, ಮೈಶುಗರ್ ಅಧ್ಯಕ್ಷರಿಗೆ  ನೌಕರರು ಮನವಿ ಸಲ್ಲಿಸಿದರು.

ಬಾಕಿ ವೇತನಕ್ಕಾಗಿ ಮೈಶುಗರ್ ಕಾರ್ಖಾನೆ ಬಳಿ ನೌಕರರ ಪ್ರತಿಭಟನೆ ಮಾಡಿ ಆಗ್ರಹಿಸಿದರು. ಕಾರ್ಖಾನೆ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವೇತನ ನೀಡದೆ ಸಬೂಬೂ ಹೆಳ್ತಾರೆ ನಮ್ಮ ಪರಿಸ್ಥಿತಿ ಕೆಟ್ಟಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ಬಾಕಿ ವೇತನ ಬಿಡುಗಡೆಗೆ ನೌಕರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರಘು, ರಮೇಶ್ ಸೇರಿದಂತೆ ಹಲವರು ಭಾಗಿಯಾದರು.