ಮೈಸೂರು : ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿಯಾಗಿರುವ ಘಟನೆ ಸರಗೂರು ತಾಲೂಕಿನ ಕುರ್ಣೇಗಾಲ ಕೂಡಗಿ ಗ್ರಾಮದಲ್ಲಿ ನಡೆದಿದೆ.

ಕೂಡಗಿ ಗ್ರಾಮದ ನಿಂಗಯ್ಯ  (65) ಹುಲಿ ದಾಳಿಯಿಂದ ಮೃತಪಟ್ಟ ವ್ಯಕ್ತಿ. ಕುರ್ಣೇಗಾಲದ ಗ್ರಾಮದ ಕಾಡಂಚಿನ ಜಮೀನೊಂದರಲ್ಲಿ ನಿಂಗಯ್ಯ ಹಸು ಮೇಯಿಸುತ್ತಿದ್ದನು.

ಈ ವೇಳೆ ಹುಲಿ ದಾಳಿ ಮಾಡಿದೆ. ನರಭಕ್ಷಕ ಹುಲಿಗೆ ಗ್ರಾಮಸ್ಥರು ಹೆದರಿದರು. ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.