ನಂಜನಗೂಡು: ನಂಜನಗೂಡು ತಾಲ್ಲೂಕು ಆಡಳಿತ ಭವನಕ್ಕೆ ಸಂಸದ ಸುನೀಲ್ ಬೋಸ್ ದಿಢೀರ್ ಭೇಟಿ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಕೆಲಸಕ್ಕಾಗಿ ನಾನು ನಂಜನಗೂಡಿಗೆ ಬಂದಿದ್ದೆ. ರಾಜಣ್ಣನವರು ಸಚಿವ ಸ್ಥಾನದಿಂದ ರಾಜೀನಾಮೆ ನೀಡಿರುವುದು ಅಂಗೀಕಾರವಾಗಿದೆ. ಹೆಚ್.ಡಿ ಕೋಟೆ ಶಾಸಕರಾದ ಅನಿಲ್ ಚಿಕ್ಕಮಾದು ರವರು ನನ್ನ ಆತ್ಮೀಯ ಸ್ನೇಹಿತರು.

ನನ್ನ ಲೋಕಸಭಾ ಕ್ಷೇತ್ರಕ್ಕೆ ಹೆಚ್‍.ಡಿ ಕೋಟೆಯು ಒಳಪಡುತ್ತದೆ. ಹಾಗಾಗಿ ಅನಿಲ್ ಚಿಕ್ಕಮಾದು ರವರಿಗೆ ಸಚಿವ ಸ್ಥಾನ ನೀಡಲಿ. ಹೈಕಮಾಂಡ್ ಮತ್ತು ಸಿಎಂ ಸಿದ್ದರಾಮಯ್ಯರವರು ಅವಕಾಶಕೊಟ್ಟರೆ ಸಚಿವ ಸ್ಥಾನವನ್ನು ಅನಿಲ್ ಚಿಕ್ಕಮಾದುರವರು ನಿಭಾಯಿಸುತ್ತಾರೆ. ಅವರಿಗೆ ಎಲ್ಲಾ ರೀತಿಯ ಶಕ್ತಿ ಇದೆ, ಯುವಕರಾಗಿದ್ದಾರೆ. ಹೈಕಮಾಂಡ್ ತೀರ್ಮಾನ ಮಾಡಬೇಕು.

ಸರ್ಕಾರದಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. 136 ಶಾಸಕರಿದ್ದಾರೆ, ಯಾವ ರೀತಿ ಬದಲಾವಣೆಯಾಗುತ್ತೆ ಹೇಳಿ. ಐದು ವರ್ಷ ನಾವು ಪೂರೈಸುತ್ತೇವೆ. ಯಾವುದೇ ಕಾರಣಕ್ಕೂ ಬದಲಾವಣೆ ಆಗುವುದಿಲ್ಲ. ಮುಂದಿನ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಈ ವರ್ಷದಲ್ಲೇ ನಡೆಯುತ್ತದೆ ಎಂದು ಸಿಎಂ ಸಿದ್ದರಾಮಯ್ಯ ರವರು ಹೇಳಿದ್ದಾರೆ. ಈಗಾಗಲೇ ಕಾಂಗ್ರೆಸ್ ಕಾರ್ಯಕರ್ತರು ಸದೃಢರಾಗಿದ್ದಾರೆ. ನಾವು ಮುಂದಿನ ಚುನಾವಣೆಯನ್ನು ಎದುರಿಸಲು ಸಿದ್ಧರಿದ್ದೇವೆ ‌ಎಂದು ಸಂಸದ ಸುನೀಲ್ ಬೋಸ್ ಹೇಳಿದರು.