ಮೈಸೂರು: ನಟ ದರ್ಶನ್ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸಿದ್ದಾರೆ. ಬೆನ್ನು ನೋವಿನಿಂದ ನಟ ದರ್ಶನ್ ಬಳಲುತ್ತಿದ್ದರು. ಈಗಾಗಲೇ ಶಸ್ತ್ರ ಚಿಕಿತ್ಸೆಗೆ ದರ್ಶನ್ ಒಪ್ಪಿಕೊಂಡಿದ್ದಾರೆ. ಡಾ.ಅಜಯ್ ಹೆಗ್ಡೆ ಬಳಿ ನಟ ಚಿಕಿತ್ಸೆಗೆ ಬಂದಿದ್ದಾರೆ. ಸಂಕ್ರಾಂತಿ ಬಳಿಕ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾರೆ ಎಂದು ವೈದ್ಯರು ತಿಳಿಸಿದ್ದರು.
ನಟ ದರ್ಶನ್ ಗೆ ಶಸ್ತ್ರ ಚಿಕಿತ್ಸೆ ಇಂದಿಲ್ಲ. ಶಸ್ತ್ರ ಚಿಕಿತ್ಸೆಗು ಮುನ್ನ ನರ್ವ್ ರೂಟ್ ಬ್ಲಾಕ್, ಎಪಿಡ್ಯೂರಲ್ ಇಂಜೆಕ್ಷನ್ ವೈದ್ಯರು ಕೊಡಲಿದ್ದಾರೆ. L5- S1 ಸಮಸ್ಯೆಯಿಂದ ನಟ ಬಳಲುತ್ತಿದ್ದಾರೆ. ಸದ್ಯ ಈಗ ಕೊಡುವ ಇಂಜೆಕ್ಷನ್ ವರ್ಕ್ ಆಗದಿದ್ದರೆ ಮೂರು ದಿನಗಳ ನಂತರ ವೈದ್ಯರು ಅಪರೇಷನ್ ಮಾಡಲಿದ್ದಾರೆ. ಈಗಾಗಲೇ ಸ್ಟ್ರೆಂತನಿಂಗ್ ವರ್ಕೌಟ್ ದರ್ಶನ್ ಶುರುಮಾಡಿದ್ದಾರೆ. ದೇಹದ ಮೇಲ್ಭಾಗ ಮಾತ್ರ ವರ್ಕೌಟ್ ಮಾಡಲು ವೈದ್ಯರು ತಿಳಿಸಿದ್ದಾರೆ.
ಎಪಿಡ್ಯೂರಲ್ ಇಂಜೆಕ್ಷನ್ ಕೊಡುವ ಮುನ್ನ ದರ್ಶನ್ ಗೆ ಇಂಜೆಕ್ಷನ್ ಸೈಡ್ ಎಫೆಕ್ಟ್ ವರ್ಕ್ ಆಗುವ ರೀತಿ ಎಲ್ಲವನ್ನು ವೈದ್ಯರು ವಿವರಿಸಿದ್ದಾರೆ. ವೈದ್ಯರ ವಿವರಣೆ ಕೇಳಿ ಇಂಜೆಕ್ಷನ್ ಕೊಡಲು ದರ್ಶನ್ ಸಮ್ಮತಿ ನೀಡಿದರು. ಅಪರೇಷನ್ ನಿಶ್ಚಿತವಾದರೆ ದರ್ಶನ್, ಪತ್ನಿ ವಿಜಯಲಕ್ಷ್ಮಿ, ದರ್ಶನ್ ಸಹೋದರ ದಿನಾಕರ್, ಮಗ ವಿನೀಶ್ ನಾಲ್ವರನ್ನು ಕರೆಸಿ ಆಪರೇಷನ್ ಬಗ್ಗೆ, ಆಪರೇಷನ್ ನಂತರ ಎಫೆಕ್ಟ್ ಬಗ್ಗೆ ಕೌನ್ಸಿಲಿಂಗ್ ರೂಪದಲ್ಲಿ ವೈದ್ಯರು ಮಾಹಿತಿ ನೀಡಲಿದ್ದಾರೆ. ಈ ಬಗ್ಗೆ ದರ್ಶನ್ ಗೆ ವೈದ್ಯ ಡಾ.ಅಜಯ್ ಹೆಗ್ಡೆ ತಿಳಿಸಿದರು.
ಒಂದು ವಾರದ ನಂತರ ಕುಟುಂಬದ ಸಮೇತವೆ ಆಸ್ಪತ್ರೆಗೆ ಬರುತ್ತೇನೆ ಎಂದು ದರ್ಶನ್ ತಿಳಿಸಿದರು. ಪಿಸಿಯೋ ಥೆರಪಿಯಲ್ಲಿ ದರ್ಶನ್ ಗೆ ಬೆನ್ನು ನೋವು ಸ್ವಲ್ಪ ಗುಣಮುಖವಾಗಿದೆ. 20 ದಿನದ ಹಿಂದೆ ಇದ್ದ ನೋವಿಗು ಇಂದಿಗು ಬಹಳ ವ್ಯತ್ಯಾಸವಿದೆ. 20% ಗಿಂತ ಬೆನ್ನುನೋವಿನಲ್ಲಿ ಚೇತರಿಕೆ ಕಂಡು ಬಂದಿದೆ. ವೈದ್ಯರ ಮಾತು ಕೇಳಿ ದರ್ಶನ್ ಖುಷಿಯಾಗಿದ್ದಾರೆ. ಪಿಸಿಯೋಥೆರಪಿ ಮುಂದುವರೆಸುವಂತೆ ಸೂಚನೆ ನೀಡಿದ್ದಾರೆ.

