ತಿ. ನರಸೀಪುರ: ಪ್ರೀತಿಸಿದ ತಪ್ಪಿಗೆ ಯುವಕ ಮಸಣ ಸೇರಿದ್ದಾನೆ. ಮಾನಕ್ಕೆ ಅಂಜಿ ಆತ್ಮಹತ್ಯೆಗೆ ಯುವಕ ಮುಂದಾಗಿರುವ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಬಿ ಸೀಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಾಗೇಂದ್ರ 23 ವರ್ಷ ಮೃತ ಯುವಕ. ಬಿ ಸೀಹಳ್ಳಿ ಗ್ರಾಮದವನಾಗಿದ್ದಾನೆ. ಯುವತಿಯ ಸಂಬಂಧಿಕರಿಂದ ನಾಗೇಂದ್ರ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ನಾಗೇಂದ್ರ ಕುಟುಂಬಸ್ಥರಿಂದ ಆರೋಪ ಮಾಡಲಾಗಿದೆ.
ಯುವತಿಯ ಕುಟುಂಬಸ್ಥರಾದ ಜೈಕುಮಾರ್, ಮಂಜು ಸೇರಿದಂತೆ ಐವರ ಮೇಲೆ ದೂರು ದಾಖಲಾಗಿದೆ. ಮೃತ ಯುವಕ ನಾಗೇಂದ್ರನ ಸಾವಿಗೆ ನ್ಯಾಯ ಕೊಡಿಸುವಂತೆ ಪೋಷಕರು ಆಗ್ರಹಿಸಿದ್ದಾರೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

