ಮೈಸೂರು : ಹಳೆ ದ್ವೇಷದ ಹಿನ್ನಲೆ ಬೈಕ್ ಅಡ್ಡಗಟ್ಟಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಸಿಗೂರು ಬಳಿ ನಡೆದಿದೆ.
ಕುಡಿತದ ವಿಚಾರದಲ್ಲಿ ಯುವಕ ಬೈದಿದ್ದನು. ಅದೇ ವಿಚಾರಕ್ಕೆ ಕುಡಿದು ಬಂದು ಪುಂಡರು ಹಲ್ಲೆ ಮಾಡಿದ್ದಾರೆ. ಸಿಗೂರಿನ ಫ್ಯಾಕ್ಟರಿ ಬಳಿ ಬೈಕ್ ಅಡ್ಡಗಟ್ಟಿ ಯುವಕರ ಗುಂಪು ಹಲ್ಲೆ ಮಾಡಿದೆ.

ತಾಲ್ಲೂಕಿನ ಆಯಿತನಹಳ್ಳಿ ಗ್ರಾಮದ ಪ್ರಜ್ವಲ್ ಹಲ್ಲೆಗೊಳಗಾಳದ ಯುವಕ. ಅದೇ ಗ್ರಾಮದ ನಾಗೇಶ್, ಪಾಲಾಕ್ಷ, ಹಾಸನ ಮೂಲದ ಅಕ್ಷಯ್ ಮತ್ತು ಮಹೇಶ್ ಎಂಬುವರಿಂದ ಹಲ್ಲೆ ನಡೆಸಲಾಗಿದೆ.

ದೊಣ್ಣೆಯಿಂದ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಗೆಳತಿಯ ಮದುವೆ ಮುಗಿಸಿ ಬರುತ್ತಿದ್ದಾಗ ರಾತ್ರಿ ಸಮಯದಲ್ಲಿ ಪುಂಡರು ಹಲ್ಲೆ ಮಾಡಿದ್ದಾರೆ. ಗಾಯಾಳು ಪ್ರಜ್ವಲ್ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

