ಮೈಸೂರು : ಯುವಕ ಗನ್ ಹಿಡಿದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಬಿಗ್ ಬಾಸ್ ಸ್ಪರ್ಧಿಗಳ ಮಚ್ಚಿನ ವಿಡಿಯೋ ಬಳಿಕ ಮೈಸೂರಿನಲ್ಲಿ ಎಲ್ಲೆಡೆ ಜ್ಯುವೆಲ್ಲರಿ ಶಾಫ್ ಮಾಲೀಕ ಟಿ.ಕೆ.ಬಡಾವಣೆಯ ವಿನೋದ್ ಎಂಬ ಯುವಕನ ವಿಡಿಯೋ ವೈರಲ್ ಆಗಿದೆ. ಗನ್ ಹಿಡಿದುಕೊಂಡು ಪೋಸ್ಟ್ ನೀಡಿದ್ದಷ್ಟೆ ಅಲ್ಲದೆ ಸರ್ಕಾರಿ ಕಾರಿನಲ್ಲಿ ಕುಳಿತು ವಿಡಿಯೋ ಮಾಡಿ ಕಾರು ದುರ್ಬಳಕೆ ಮಾಡಿದ್ದಾನೆ.

ವಿಡಿಯೋ ಮಾಡಿ ಯುವಕ ಆತಂಕ ಸೃಷ್ಟಿಸಿದ್ದಾನೆ. ತನ್ನ ಇನ್ಸ್ಟ ಅಕೌಂಟ್‌ನಲ್ಲಿ ಆತಂಕಕಾರಿ ವಿಡಿಯೋ ಮಾಡಿ ಯುವಕ ಹೀರೋ ಫೋಸ್ ಕೊಟ್ಟಿದ್ದಾನೆ. ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಾರು, ಜೀಪ್‌ಗಳಲ್ಲಿ ಆತಂಕಕಾರಿ ವಿಡಿಯೋ ವಿನೋದ್ ಮಾಡಿದ್ದಾನೆ. ಗನ್ ಒರಿಜಿನಲ್ ಅಥವಾ ಡುಪ್ಲಿಕೇಟ್ ಯಾರಿಗೂ ಗೊತ್ತಿಲ್ಲ. ಆದ್ರೆ ಗನ್ ಹಿಡಿದು ಯುವಕ ವಿಡಿಯೋ ಮಾಡಿದ್ದಾನೆ.

