ನಂಜನಗೂಡು: ಹಳ್ಳಕ್ಕೆ ಬಿದ್ದು ಕಾಡಾನೆಯೊಂದು ಮೇಲೆ ಹೇಳಲಾಗಿದೆ ಪರದಾಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಹಂಚೀಪುರ ಗ್ರಾಮದಲ್ಲಿ ನಡೆದಿದೆ.

ಹಂಚೀಪುರ ಗ್ರಾಮದ ಮಹದೇವಪ್ಪ ಎಂಬುವರ ಜಮೀನಿನಲ್ಲಿರುವ ಹಳ್ಳಕ್ಕೆ ಬಿದ್ದಿರುವ ಗಂಡಾನೆ ಮೇಲೆ ಬರಲಾಗದೆ ಪರದಾಡಿದೆ. ಇದನ್ನು ಕಂಡ ಸ್ಥಳೀಯ ರೈತರೊಬ್ಬರು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಹಳ್ಳ ತೆಗೆದು ಆನೆಯನ್ನು ಮೇಲಕ್ಕೆ ಬರುವಂತೆ ಮಾಡಿದ್ದಾರೆ. ಆಕ್ರೋಶಗೊಂಡಿರುವ ಕಾಡಾನೆ ಅಟ್ಟಾಡಿಸಿಕೊಂಡು ಬಂದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಯನ್ನು ಕಾಡಿನತ್ತ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.