ಮೈಸೂರು : ರೈತನ ಬಲಿ ಪಡೆದಿದ್ದ ಹುಲಿ ಸೆರೆಯಾದ ಘಟನೆ ಸರಗೂರು ತಾಲ್ಲೂಕಿನ ಮುಳ್ಳುರು ಬಳಿ ನಡೆದಿದೆ. ಅರಣ್ಯ ಸಿಬ್ಬಂದಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿದರು. ಸಾಕಾನೆಗಳ ಸಹಾಯದಿಂದ ಹುಲಿ ಸೆರೆಯಾಗಿದೆ. ಯಡಿಯಾಲ ಅರಣ್ಯ ವಲಯದಲ್ಲಿ ಹುಲಿ ಸೆರೆ ಸಿಕ್ಕಿದೆ.

ಮುಳ್ಳೂರು ಬಳಿ ಅರವಳಿಕೆ ನೀಡಿ ಹುಲಿ ಸೆರೆ ಹಿಡಿಯಲಾಗಿದೆ. ನಿನ್ನೆ ರಾಜಶೇಖರ ಎಂಬ ರೈತನನ್ನ  ಹುಲಿ ಬಲಿ ಪಡೆದಿತ್ತು. ಮುಳ್ಳೂರು ಗ್ರಾಮದ ಜಮೀನೊಂದರಲ್ಲಿ ರೈತನ ಮೇಲೆ ಹುಲಿ ದಾಳಿ ಮಾಡಿತ್ತು. ಹುಲಿ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಅರಣ್ಯ ಇಲಾಖೆ ರವಾನಿಸಿದೆ. ಹುಲಿ ಸೆರೆಯಿಂದ  ಜನರು ನಿಟ್ಟುಸಿರು ಬಿಟ್ಟರು.