ಮೈಸೂರು : ಚಿರತೆಯನ್ನು ಬೇಟೆಯಾಡಲು ಹುಲಿ ಮುಂದಾಗಿರುವ ಘಟನೆ ಮೈಸೂರಿನ ನಾಗರಹೊಳೆ ಅರಣ್ಯದ ದಮ್ಮನಕಟ್ಟೆಯಲ್ಲಿ ನಡೆದಿದೆ. ಸಫಾರಿಗೆ ವೇಳೆ ಪ್ರವಾಸಿಗರ ಕ್ಯಾಮರಾಕ್ಕೆ ಅಪರೂಪದ ದೃಶ್ಯ ಸೆರೆಯಾಗಿದೆ.
ಚಿರತೆಯನ್ನು ನೋಡಿ ಹುಲಿ ಬೇಟೆಯಾಡಲು ಮುಂದಾಗುತ್ತದೆ. ಈ ವೇಳೆ ಹುಲಿಯಿಂದ ತಪ್ಪಿಸಿಕೊಳ್ಳಲು ಚಿರತೆ ಮರವೇರಿದೆ. ಬಳಿಕ ಹುಲಿ ಮರವೇರುವ ಪ್ರಯತ್ನ ಮಾಡಿದೆ. ಅಪರೂಪದ ದೃಶ್ಯವನ್ನ ಕ್ಯಾಮರಾದಲ್ಲಿ ಪ್ರವಾಸಿಗರು ಸೆರೆ ಹಿಡಿದಿದ್ದಾರೆ.

