ಟಿ.ನರಸೀಪುರ: ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಟಿ.ನರಸೀಪುರ ತಾಲ್ಲೂಕಿನ ಸೊಸಲೆ ಗ್ರಾಮದಲ್ಲಿ ನಡೆದಿದೆ.
ವೀರಪ್ಪ ಒಡೆಯರ ಹುಂಡಿ ಗ್ರಾಮದ ಸಿದ್ದಲಿಂಗ(26)ಮೃತ ಯುವಕ. ಮುಂದೆ ಹೋಗುತ್ತಿದ್ದ ಆಟೋ ಓವರ್ ಟೇಕ್ ಮಾಡಲು ಲಾರಿ ಚಾಲಕ ಯತ್ನಿಸಿದ್ದನು. ಈ ವೇಳೆ ಎದುರಲ್ಲಿ ವೇಗವಾಗಿ ಬಂದ ಬೈಕ್ ಗೆ ಡಿಕ್ಕಿಯಾಗಿದೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

