ನಂಜನಗೂಡು: ಮನೆಯ ಯಜಮಾನ ಹಾರ್ಟ್ ಪೇಷಂಟ್ ಪ್ರತಿ ವಾರ ಮಾತ್ರೆಗೆ ಎಂದು ಸಾವಿರಾರು ರೂಪಾಯಿ ಖರ್ಚು ಮಾಡಬೇಕು ಜೀವ ಬದುಕಿಸಿ ಕೊಳ್ಳುವ ಸಲುವಾಗಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಂದ ಮಾಡಿರುವ ಸಾಲಕ್ಕೆ ಬಡ್ಡಿ ಕಟ್ಟಬೇಕು.

ಕೂಲಿ ಕೆಲಸ ಇದ್ದರೆ ಮಾತ್ರ ಜೀವನ ಇಲ್ಲದಿದ್ರೆ ನಮ್ಮ ಗತಿ ಹರೋಹರ ಇಂತಹ ದುಸ್ಥಿತಿಯ ಸಂದರ್ಭದಲ್ಲಿಯೇ ಹಂಗೋ ಹಿಂಗೋ ಜೀವನ ದುಡುತ್ತಿದ್ದ ವಾಸದ ಮನೆಯನ್ನು ಕಳೆದುಕೊಂಡು ಈಗ ಬೀದಿಯಲ್ಲಿ ಮಲಗುವ ಪರಿಸ್ಥಿತಿ ಎದುರಾಗಿದೆ ಎಂದು ಕರುಳು ಹಿಂಡುವ ಕಥೆಯನ್ನು ಹೇಳಿ ಕಣ್ಣೀರಿಡುತ್ತಿರುವ ಮಹಿಳೆ ನಂಜನಗೂಡು ತಾಲ್ಲೂಕಿನ ಕೆಲ್ಲೂಪುರ ಗ್ರಾಮದ ವಾಸಿಯಾಗಿದ್ದಾರೆ.

ಈಕೆಯ ಬದುಕು ಯಾವ ಸಿನಿಮಾಗಿಂತಲೂ ಕಡಿಮೆ ಏನಿಲ್ಲ ಎಂಬಂತಿದೆ ಕಳೆದ 15 ದಿನಗಳಿಂದ ನಿರಂತರವಾಗಿ ಸುರಿತ್ತಿರುವ ಜಿಟಿ ಜಿಟಿ ಮಳೆಯಿಂದ ಅನಾದಿಕಾಲದ ಮಣ್ಣಿನ ಗೋಡೆಯ ವಾಸದ ಮನೆ ಶಿಥಿಲ ವ್ಯವಸ್ಥೆಯಿಂದ ನೆಲೆ ಕಚ್ಚಿದೆ. ಕಿತ್ತು ತಿನ್ನುವ ಕಡುಬಡತನದಿಂದ ಬೇಸತ್ತಿರುವ ಮಹಿಳೆ ನೀಲಮ್ಮ ಕಷ್ಟವನ್ನು ಹೇಳಿಕೊಂಡು ಕಣ್ಣೀರಿಡುತ್ತಿದ್ದಾಳೆ.

ಕಳೆದ ಎರಡು ಮೂರು ವರ್ಷಗಳಿಂದ ಮನೆಯ ಯಜಮಾನ ಶಿವಮೂರ್ತಿ ಎಂಬುವರಿಗೆ ಹೃದಯ ಸಮಸ್ಯೆ ಇದೆ. ಜೀವ ಬದುಕಿಸಿಕೊಳ್ಳಲು ಸಂಘಗಳಿಂದ ಮಾಡಿರುವ ಸಾಲಕ್ಕೆ ಬಡ್ಡಿ ಕಟ್ಟಬೇಕು ಕೂಲಿಯನ್ನು ನಂಬಿ ಬದುಕುವ ಬಡ ಕುಟುಂಬಕ್ಕೆ ಈಗ ಮತ್ತೊಂದು ಅಘಾತವಾಗಿದೆ.
ಸಾಕಷ್ಟು ವರ್ಷಗಳಿಂದ ವಾಸಿಸುತ್ತಿದ್ದ ಹಳೆಯ ತಲೆಮಾರಿನ ವಾಸದ ಮನೆ ನಿರಂತರವಾಗಿ ಸುರಿಯುತ್ತಿರುವ ಜಿಟಿ ಮಳೆಯಿಂದ ಕುಸಿದಿದೆ. ವಾಸಿಸಲು ಮನೆ ಇಲ್ಲದೆ ಈಗ ಬೀದಿಗೆ ಬಿದ್ದಿರುವ ಬಡ ಕುಟುಂಬಕ್ಕೆ ಸೂಕ್ತ ಪರಿಹಾರದ ಜೊತೆಗೆ ವಾಸದ ಮನೆಯನ್ನು ಕಲ್ಪಿಸಿಕೊಡಲು ತಾಲ್ಲೂಕು ಆಡಳಿತ ಮುಂದಾಗಬೇಕಿದೆ.

