ಮೈಸೂರು: ದೂರಿನ ಬಗ್ಗೆ ವಿಚಾರಣೆಗೆ ಬಂದ ವ್ಯಕ್ತಿ ಮೇಲೆ ಪತ್ನಿ ಹಾಗೂ ಬೀಗರು ಸೇರಿ ಠಾಣೆಯಲ್ಲೇ ಹಲ್ಲೆ ನಡೆಸಿದ ಘಟನೆ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಶಂಕರ್ ಎಂಬುವರು ಗಾಯಗೊಂಡವರು.ಪತ್ನಿ ಮಂಜುಳಾ ಹಾಗೂ ಬೀಗರಾದ ತಿಮ್ಮೇಗೌಡ ಮತ್ತು ಇವರ ಪತ್ನಿ ಚೌಡಮ್ಮ ವಿರುದ್ದ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೌಟುಂಬಿಕ ಕಲಹ ಹಿನ್ನಲೆ ಶಂಕರ್ ರವರು ತಮ್ಮ ಮಗನ ವಿರುದ್ದ ಸೌತ್ ಪೊಲೀಸ್ ಠಾಣೆಯ ಲ್ಲಿ ದೂರು ನೀಡಿದ್ದರು.

ವಿಚಾರಣೆಗಾಗಿ ಶಂಕರ್ ಸೌತ್ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಶಂಕರ್ ಪತ್ನಿ ಮಂಜುಳಾ ರವರು ತನ್ನ ತಂದೆ ತಿಮ್ಮೇಗೌಡ ಹಾಗೂ ತಾಯಿ ಚೌಡಮ್ಮ ಸಮೇತ ಠಾಣೆಗೆ ಬಂದು ಹಲ್ಲೆ ನಡೆಸಿದ್ದಾರೆ. ಚೇರ್ ನಿಂದ ತಲೆ ಹೊಡೆದಿದ್ದಲ್ಲದೆ ಪತ್ನಿ ಮಂಜುಳಾ ಪತಿಯ ಮರ್ಮಾಂಗಕ್ಕೆ ಹೊಡೆದು ಗಾಯಗೊಳಿಸಿದ್ದಾರೆ.ಘಟನೆ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ ಶಂಕರ್ ಪ್ರಕರಣ ದಾಖಲಿಸಿದ್ದಾರೆ.