ಮೈಸೂರು: ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರು ನವವಧುವಿನಂತೆ ಸಿಂಗಾರಗೊಳ್ಳುತ್ತಿದೆ. ಬಣ್ಣಬಣ್ಣದ ದೀಪಾಲಂಕಾರದಿಂದ ಅರಮನೆಗಳ ನಗರಿ ಕಂಗೊಳಿಸಲಿದೆ.

ಈ ಬಾರಿ ಎಲ್ ಐ ಸಿ ವೃತ್ತದಲ್ಲಿ ನೂತನ ಕಾನ್ಸೆಪ್ಟ್ ಮನಸೂರೆಗೊಳ್ಳಲಿದೆ. ಕೆಇಬಿ ವತಿಯಿಂದ ನಿರ್ಮಿಸಲಾಗುತ್ತಿರುವ ಕೃಷ್ಣಾರ್ಜುನ ರಥ ಈ ಬಾರಿ ದಸರಾದ ಪ್ರಮುಖ ಆಕರ್ಷಣೆಯಾಗಲಿದೆ. 50 ಅಡಿ ಎತ್ತರ,50 ಅಡಿ ಅಗಲ,80 ಅಡಿ ಉದ್ದ ವಿಸ್ತೀರ್ಣದಲ್ಲಿ ಸಿದ್ದವಾಗುತ್ತಿರುವ ಕೃಷ್ಣಾರ್ಜುನ ರಥ ಮೈಸೂರಿಗೆ ಬರುವ ಪ್ರವಾಸಿಗರಿಗೆ ಮುದ ನೀಡುತ್ತಾ ಸ್ವಾಗತಿಸಲಿದೆ.
ಕಾವಾ ವಿದ್ಯಾರ್ಥಿ ಪುನೀತ್ ಹಾಗೂ ತಂಡ ಕಳೆದ ಒಂದು ತಿಂಗಳಿಂದ ಬೃಹತ್ ರಥ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷತೆಯಿಂದ ಕೂಡಿದ ಈ ಬಾರಿಯ ದಸರಾದಲ್ಲಿ ಕೃಷ್ಣಾರ್ಜುನ ರಥ ಸೂಜಿಗಲ್ಲಿನಂತೆ ಸೆಳೆಯಲಿದೆ.

