ಮೈಸೂರು : ನಡು ರಸ್ತೆಯಲ್ಲೇ ಯುವಕರ ಎರಡು ಗುಂಪು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಟ ನಡೆಸಿದ ಘಟನೆ ನಂಜನಗೂಡು ತಾಲ್ಲೂಕಿನ ಕವಲಂದೆ ಹೋಬಳಿಯ ಚುಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೈಕ್ ಸೈಡ್ ಹಾಕಿದ ವಿಚಾರಕ್ಕೆ ಗಲಾಟೆ ಎನ್ನಲಾಗಿದೆ. ಚುಂಚನಹಳ್ಳಿ ಮಹದೇಶ್ವರ ಜಾತ್ರಾಗೆ ಯುವಕರು ಬಂದಿದ್ದರು. ಎರಡು ದಿನಗಳಿಂದ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಜಾತ್ರೆಗೆ ಬಂದಿದ್ದ ಯುವಕರ ಗುಂಪಿನ ಗಲಾಟೆಯಲ್ಲಿ ಇಬ್ಬರು ಯುವಕರಿಗೆ ಗಾಯಗಳಾಗಿದೆ.
ಗಾಯಾಳುಗಳು ಕೆ ಆರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೈಸೂರು ಮೂಲದ ಯುವಕ ದರ್ಶನ್‌ಗೆ ಗಂಭೀರ ಗಾಯವಾಗಿದೆ. ಗಲಾಟೆ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ. ಪ್ರಕರಣ ಕವಲಂದೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

