ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡು ನಗರದ ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಯುವ ಮುಖಂಡ ಎಂ.ಡಿ ಬಾಲರಾಜು ನೇತೃತ್ವದ ಯುವಕರ ತಂಡ ಸ್ವಚ್ಛಗೊಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಮತ್ತು ನಂಜನಗೂಡು ನಗರಸಭೆ ಹಾಗೂ ತಾಲ್ಲೂಕು ಆಡಳಿತದ ನಿರ್ಲಕ್ಷ್ಯದಿಂದಾಗಿ ಸ್ವಚ್ಛತೆ ಕಾಣದೆ ಧೂಳಿನಿಂದ ಕೂಡಿತ್ತು, ಇದನ್ನು ಮನಗಂಡು ಇಂದು ಭಾನುವಾರ ಯುವಕರ ತಂಡ ಅಂಬೇಡ್ಕರ್ ಅವರ ಪ್ರತಿಮೆ ಮತ್ತು ಗೋಪುರವನ್ನು ಸ್ವಚ್ಛತೆ ಮಾಡುತ್ತಿದ್ದಾರೆ.
ನಂತರ ಯುವ ಮುಖಂಡ ಎಂ.ಡಿ ಬಾಲರಾಜು ಮಾತನಾಡಿ, ಬಹುತೇಕ ಹಳ್ಳಿಗಳಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಯುವಕರು ಮುಂದಾಗುತ್ತಿದ್ದಾರೆ. ಈಗಾಗಲೇ ಸಾಕಷ್ಟು ದೇಶ ಮತ್ತು ರಾಜ್ಯಗಳಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ನಿರ್ಮಾಣ ಮಾಡಿದ್ದಾರೆ.

ಆದರೆ, ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಪ್ರತಿಮೆಗಳನ್ನು ನಿರ್ಮಾಣ ಮಾಡುವುದಷ್ಟೇ ಮುಖ್ಯವಲ್ಲ ನಿರ್ವಹಣೆ ಮಾಡಿಕೊಂಡು ಜ್ಞಾನದ ಸಂಕೇತವಾಗಿ ನಾವು ಕಾಣಬೇಕು. ಅಂಬೇಡ್ಕರ್ ಅವರು ಅಂದೆ ಹೇಳಿದ್ದರು ನನ್ನನ್ನು ಪ್ರತಿಮೆಗಳಲ್ಲಿ ಹುಡುಕಬೇಡಿ ಪುಸ್ತಕದಲ್ಲಿ ಹುಡುಕಿ ಎಂದು. ಹಾಗಾಗಿ ಮುಂದಿನ ಪೀಳಿಗೆ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸ್ವಚ್ಛತಾ ಕಾರ್ಯದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ಯುವ ಮುಖಂಡರಾದ ಮುಳ್ಳೂರು ಮಹದೇವಸ್ವಾಮಿ, ಅಕ್ಷಯ್, ಅರುಣ್, ಜಯರಾಮ್, ಸುರೇಶ್, ವೀರಭದ್ರ, ಶಿವರಾಜು, ಚಿಗುರು ಸೇರಿದಂತೆ ಹಲವು ಯುವಕರು ಭಾಗವಹಿಸಿದ್ದರು.

