ನಂಜನಗೂಡು: ಅಶೋಕ ಅಂಬೇಡ್ಕರ್ ಧಮ್ಮ ಯಾತ್ರೆಗೆ ಅದ್ದೂರಿ ಸ್ವಾಗತ ಕೋರಿದರು. ನಂಜನಗೂಡು ನಗರದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೌದ್ಧರು ಬರಮಾಡಿಕೊಂಡರು.
ಕೇರಳ ಧಮ್ಮಭೂಮಿ ಯಿಂದ ಮಹಾರಾಷ್ಟ್ರದ ನಾಗಪುರ ದೀಕ್ಷಾಭೂಮಿ ವರೆಗೆ ಅಶೋಕ ಅಂಬೇಡ್ಕರ್ ಧಮ್ಮ ಯಾತ್ರೆ ನಡೆಯಿತು. ಅ.2 ಕ್ಕೆ ನಾಗಪುರ ದೀಕ್ಷಭೂಮಿಗೆ ಯಾತ್ರೆ ತಲುಪಿದೆ. ಇಂದು ನಂಜನಗೂಡಿಗೆ ಅಶೋಕ ಅಂಬೇಡ್ಕರ್ ಧಮ್ಮ ಯಾತ್ರೆಯ ರಥ ಆಗಮಿಸಿದೆ.
ಭಗವಾನ್ ಬುದ್ಧರು, ಚಕ್ರವರ್ತಿ ಅಶೋಕ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ನಂಜನಗೂಡು ತಥಾಗತ ಬುದ್ಧ ವಿಹಾರದ ಪದಾಧಿಕಾರಿಗಳು. ಅಶೋಕ ರಥಕ್ಕೆ ಅದ್ದೂರಿಯಾಗಿ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ತಥಾಗತ ಬುದ್ಧ ವಿಹಾರದ ಅಧ್ಯಕ್ಷ ಚಿನ್ನಂಬಳ್ಳಿ ಸಿಆರ್ ಮಹದೇವು, ಕಾರ್ಯದರ್ಶಿ ಸಿಎಂ ಅಂಕಯ್ಯ, ದಲಿತ ಸಂಘರ್ಷ ಸಮಿತಿಗೆ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್, ಮಲ್ಲಹಳ್ಳಿ ನಾರಾಯಣ್, ಜನಸಂಗ್ರಾಮ ಪರಿಷತ್ ರಾಜ್ಯ ಗೌರವಾಧ್ಯಕ್ಷ ನಗರ್ಲೆ ವಿಜಯಕುಮಾರ್,
ದಸಂಸ ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ, ದಸಂಸ ತಾಲ್ಲೂಕು ಸಂಚಾಲಕ ಶಂಕರಪುರ ಸುರೇಶ್, ನಿವೃತ್ತ ಶಿಕ್ಷಕ ಮಹದೇವಯ್ಯ, ವಾಸುದೇವಮೂರ್ತಿ ಕಾರ್ಯ ಜಯಶಂಕರ್, ಕುಮಾರಸ್ವಾಮಿ, ಬಿಎಸ್ಪಿ ಶ್ರೀಕಂಠ, ಹರೀಶ್, ಹಿರಿಯ ಉಪನ್ಯಾಸಕ ಮಹದೇವಯ್ಯ ಸೇರಿದಂತೆ ಹಲವರು ಭಾಗಿಯಾದರು.

