ಮೈಸೂರು : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ಲಕ್ಷ್ಮಿ (14) ಮೃತ ಸಾವನ್ನಪ್ಪಿದ ಬಾಲಕಿ.

ಬಾಲಕಿ ಲಕ್ಷ್ಮಿ ಜನತಾ ನಗರದ ನಿವಾಸಿಯಾಗಿದ್ದು, ಹೊಟ್ಟೆ ನೋವಿನಿಂದ ಡಿಸೆಂಬರ್ 19ರಂದು ಜನತಾ ನಗರದ ಖಾಸಗಿ ಆಸ್ಪತ್ರೆಗೆ ಲಕ್ಷ್ಮಿ ದಾಖಲಾಗಿದ್ದರು. 20 ರಂದು ಶಸ್ತ್ರಚಿಕಿತ್ಸೆ ಆಗಿತ್ತು. 21 ರಂದು ಮತ್ತೊಂದು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.ನಿನ್ನೆ ಬೆಳಗಿನ ಜಾವ ಲಕ್ಷ್ಮಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಶಸ್ತ್ರಚಿಕಿತ್ಸೆ ಮಾಡಿದ್ದ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಬಾಲಕಿ ಸಾವು ಎಂದು ಆರೋಪ ಕೇಳಿಬಂದಿದೆ. ಜನತಾ ನಗರದ ಆಸ್ಪತ್ರೆ ಮುಂದೆ ಬಾಲಕಿ ಪೋಷಕರು ಸಂಬಂಧಿಕರ ಪ್ರತಿಭಟನೆ ನಡೆಸಿದ್ದು, ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.