ಮೈಸೂರು : ಆಸ್ತಿ ವಿಚಾರಕ್ಕೆ ದಾಯಾದಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಹುಣಸೂರಿನ ತಾಲ್ಲೂಕಿನ ಕುಡಿನೀರಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನ್ಯಾಯಾಲಯದಲ್ಲಿ ವಿವಾದವಿದ್ದರೂ ಜಮೀನಿಗೆ ನುಗ್ಗಿ ಗಲಾಟೆ. ಮಾಡಿದ್ದಾರೆ. ಕೋರ್ಟ್ ಆದೇಶಕ್ಕೆ ಕ್ಯಾರೆ ಎನ್ನದೆ ಎರಡೂ ಕುಟುಂಬದಿಂದ ಗುದ್ದಾಟ ನಡೆದಿದೆ. ಸರ್ವೆ ನಂ.54, 54/1 ರ ನಾಲ್ಕು ಎಕರೆ ಭೂಮಿಗೆ ದಾಯಾದಿ ಕಲಹ ಉಂಟಾಗಿದೆ.
ತಿಮ್ಮಮ್ಮ ಹಾಗು ಹೊನ್ನೇಗೌಡ ಕುಟುಂಬದ ನಡುವೆ ಜಮೀನಿನ ವಿಷಯಕ್ಕೆ ಜಗಳ ನಡೆದಿದ್ದು, ಅವಾಚ್ಯ ಶಬ್ದಗಳೊಂದಿಗೆ ತಳ್ಳಾಟ ನೂಕಾಟ ನಡೆದಿದ್ದು, ಎರಡೂ ಕುಟುಂಬಸ್ಥರಿಂದ ಮೊಬೈಲ್ ಹಿಡಿದು ವಿಡಿಯೋ ಸೆರೆ. ಹಿಡಿಯಲಾಗಿದೆ. ಜೆಸಿಬಿ ಚಕ್ರದಡಿ ಮಲಗಿ ಹೈಡ್ರಾಮ ಮಾಡಿದ್ದು, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

