ನಂಜನಗೂಡು: ಮೇವು ಮೇಯೆಲು ಬಂದ ಹರಕೆ ಗೂಳಿಯೊಂದು ಗೋಡೆಯ ಕಿಂಡಿಗೆ ಸಿಲುಕಿಕೊಂಡು ಪರದಾಡಿರುವ ಘಟನೆ ನಂಜನಗೂಡು ನಗರದ ಲಿಂಗಭಟ್ಟರ ಗುಡಿಯ ಬಳಿ ನಡೆದಿದೆ.
ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿಗೆ ಭಕ್ತರು ಹರಕೆ ಹೊತ್ತು ಬಿಡುವ ಗೂಳಿ ಇದಾಗಿದ್ದು, ಮೇಯಲು ಹೋದ ಗೂಳಿಯು ಗೋಡೆಯ ಕಿಂಡಿಗೆ ತನ್ನ ತಲೆಯನ್ನು ಹಾಕಿ ಸಿಲುಕಿಕೊಂಡಿದೆ. ಅದರಿಂದ ಹೊರಬರಲು ಹರಸಾಹಸ ಪಟ್ಟಿದ್ದು, ಸ್ಥಳೀಯರೊಬ್ಬರು ಇದನ್ನು ಗಮನಿಸಿ ವನ್ಯಜೀವಿ ಸಂರಕ್ಷಕ ಗೋಳೂರು ಸ್ನೇಕ್ ಬಸವರಾಜ್ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಗೋಳೂರು ಶ್ರೀ ಬಸವರಾಜುರವರು ಗೋಡೆಯನ್ನು ಹೊಡೆದು ಗೂಳಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಸ್ನೇಕ್ ಬಸವರಾಜುರವರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

