ತಿ. ನರಸೀಪುರ: ಯುಗಾದಿ ಪುಣ್ಯಸ್ನಾನಕ್ಕೆ ತೆರಳಿದ್ದ ಬಾಲಕ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ನಡೆದಿದೆ.
ಶರಣ್ 13 ವರ್ಷ ಮೃತ ಬಾಲಕ. ಟಿ ನರಸೀಪುರ ಪಟ್ಟಣದ ಶ್ರೀರಾಂಪುರ ನಿವಾಸಿಯಾಗಿದ್ದು, ಸ್ನೇಹಿತರ ಜೊತೆ ಶರಣ್ ಪುಣ್ಯಸ್ನಾನಕ್ಕೆ ತೆರಳಿದ್ದನು. ಈ ವೇಳೆ ನೀರಿನಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿದ್ದಾನೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯುಗಾದಿ ಪುಣ್ಯಸ್ನಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಕಳೆದ ವಾರ ತಾತ ಮೊಮ್ಮಕಳು ಮೂವರನ್ನ ಬಲಿ ಪಡೆದಿದ್ದ ಜಾಗದಲ್ಲೇ ಬಾಲಕ ಬಲಿಯಾಗಿದ್ದಾನೆ. ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

