ನಂಜನಗೂಡು: ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ನಂತರ ಯುವ ಪತ್ರಕರ್ತ ಸಿ.ಎಂ ಸುಗಂಧರಾಜು ಅವರು ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ಪತ್ರಕರ್ತರಾದ ಸಿಎಂ ಸುಗಂಧರಾಜು, ಮುಖ್ಯ ಶಿಕ್ಷಕರಾದ ಬಸವರಾಜು, ಕರ್ನಾಟಕ ಭೀಮ್ ಸೇನೆಯ ಕಣೇನೂರು ಚಂದ್ರು ರವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿ, ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್ ವಿತರಿಸಲಾಯಿತು. ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಪುಟ್ಟಬುದ್ಧಿ, ಎಸ್.ಸಿ ಬ್ಲಾಕ್ ಅಧ್ಯಕ್ಷ ಹಲ್ಲರೆ ಮಹದೇವ್, ಕರ್ನಾಟಕ ಭೀಮ್ ಸೇನೆಯ ಕಣೇನೂರು ಚಂದ್ರು, ಹೆಚ್.ಆರ್ ನಾಗುರ್, ಯಾಜಮಾನರಾದ ಮಲಿಯಯ್ಯ, ಹೆಚ್.ಕೆ ಮಹದೇವಯ್ಯ, ಉಪಾಧ್ಯಕ್ಷ ಮಹೇಶ್, ಸರ್ಕಾರಿ ಶಾಲಾ ಮುಖ್ಯ ಶಿಕ್ಷಕ ಬಸವರಾಜು, ಪುಟ್ಟದೇವಯ್ಯ, ರಮೇಶ್, ಮಹೇಂದ್ರ, ಲೋಕೇಶ್ ಸೇರಿದಂತೆ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.