ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಸರದಿಯಲ್ಲಿ ನಿಂತಿದ್ದ 70 ವರ್ಷದ ಮಹಿಳೆಯೊಬ್ಬರು ಮೋದಿ ಆಗಮಿಸುತ್ತಿದ್ದಂತೆ ದಿಢೀರ್ ಕುಸಿದು ಬಿದ್ದ ಘಟನೆ ಮೈಸೂರಿನ ಚಾಮುಂಡಿಬೆಟ್ಟದ ತಾರಾಲಯದಲ್ಲಿ ನಡೆದಿದೆ.
ನಂಜನಗೂಡು ಪುರಸಭೆಯ ಮಾಜಿ ಸದಸ್ಯೆ ಕೆ. ಪ್ರೇಮಾ (70) ಕುಸಿದು ಬಿದ್ದ ಮಹಿಳೆ. ತಕ್ಷಣ ಗಮನಿಸಿದ ಪ್ರಧಾನಿ ಮೋದಿ, ಮಹಿಳೆಗೆ ಕುಡಿಯಲು ನೀರು ನೀಡಿ, ಎಲೆಕ್ಟ್ರೋಲ್ ಕುಡಿಸಿ ಸಮಾಧಾನಪಡಿಸಿದ್ದಾರೆ.
ಬಳಿಕ ವೈದ್ಯಕೀಯ ಸಿಬ್ಬಂದಿಯಿಂದ ಬಿಪಿ, ಸಕ್ಕರೆ ಸೇರಿದಂತೆ ಆರೋಗ್ಯ ತಪಾಸಣೆ ಮಾಡಿಸಲಾಯಿತು. ಮಹಿಳೆಯ ಮೊಬೈಲ್ ಸಂಖ್ಯೆ ಪಡೆದುಕೊಂಡ ಪ್ರಧಾನಿ, ಕಾರ್ಯಕ್ರಮ ಮುಗಿಸಿ ತೆರಳುವ ವೇಳೆಯೂ ಮತ್ತೆ ಆರೋಗ್ಯ ವಿಚಾರಿಸಿ ಮಾನವೀಯತೆ ಮೆರೆದರು.

