ನಂಜನಗೂಡು: ಸಚಿವರಾದ ಹೆಚ್.ಕೆ ಪಾಟೀಲ್ ರವರೆ ಹೇಳುತ್ತಿದ್ದಾರೆ 63% ಪರ್ಸೆಂಟ್ ಅಂತ. ನಮಗೆ 40% ಅಂತ ಹೇಳ್ತಾ ಇದ್ರು. ನೂರು ರೂಪಾಯಿಯಲ್ಲಿ 63 ಅಲ್ಲಿಗೆ ಹೋಗ್ತಾ ಇದೆ. ಸರಿಯಾಗಿ ತಲುಪುತ್ತಿಲ್ಲ ಅಂತ ಸಚಿವರೆ ಹೇಳ್ತಾ ಇದ್ದಾರೆ.

ನಮ್ಮನ್ನ 40% ಪರ್ಸೆಂಟ್ ಅಂತ ಹೇಳಿ ಈಗ ಕಾಂಗ್ರೆಸ್ನವರು 63% ಮಾಡಿಬಿಟ್ಟಿದ್ದಾರೆ. ಜನರಿಗೆ ಗೊತ್ತಾಗ್ತಾ ಇದೆ. ತಾಲ್ಲೂಕು ಆಡಳಿತದಲ್ಲಿ ಯಾವ ರೀತಿ ಕೆಲಸಗಳು ಆಗ್ತಾ ಇದೆ ಅಂತ. ನಮ್ಮ ಮೇಲೆ ಆರೋಪ ಮಾಡಿರುವವರ ಮೇಲೆ ಒಬ್ಬರ ಮೇಲೂ ಕೇಸ್ ಯಾಕೆ ಹಾಕಿಲ್ಲ. ಯಾರೊಬ್ಬರ ಮೇಲಾದರೂ ಕೇಸ್ ಹಾಕಬೇಕಿತ್ತು ತಾನೇ.

ಅದರ ಮೇಲೆ ತಗೊಂಡು ಬಂದು ಎಲೆಕ್ಷನ್ ಗೆದ್ದಿರೋದು ಕಾಂಗ್ರೆಸ್. ಒಬ್ಬರ ಮೇಲು ಕೇಸ್ ಮಾತ್ರ ಹಾಕಿಲ್ಲ. ಸರ್ಕಾರದಲ್ಲಿರುವ ಸಚಿವರೆ ಹೇಳ್ತಾ ಇದ್ದಾರೆ 63% ಪರ್ಸೆಂಟ್ ಅಂತ. ಪ್ರತಿ ನೂರು ರೂಪಾಯಿಯಲ್ಲೂ 63 ರೂಪಾಯಿ ಹೋಗ್ತಾ ಇದೆ. ಇದನ್ನು ಅವರೇ ವಿಮರ್ಶೆ ಮಾಡಿಕೊಳ್ಳಬೇಕು ಎಂದು ನಂಜನಗೂಡಿನಲ್ಲಿ ಮಾಜಿ ಶಾಸಕ ಬಿ ಹರ್ಷವರ್ಧನ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.