ಮೈಸೂರು : ಕಬಿನಿ ಜಲಾಶಯದಿಂದ 25ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆಯಾಗಿದ್ದು, ಕಬಿನಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಭೀತಿ ಹೆದುರಾಗಿದೆ. ಮೈದುಂಬಿ ಕಪಿಲಾ ನದಿ ಹರಿಯುತ್ತಿದೆ.

ತ್ರಿವೇಣಿ ಸಂಗಮದ ಬಳಿ ನದಿ ವೀಕ್ಷಣೆಗೆ ಜನತೆ ಬರುತ್ತಿದೆ. ಟಿ ನರಸೀಪುರ ತಾಲ್ಲೂಕಿನಲ್ಲಿ ತ್ರಿವೇಣಿ ಸಂಗಮವಾಗಿದ್ದು, ಕಾವೇರಿ, ಕಪಿಲಾ ನದಿಗಳು ಸಂಗಮವಾಗುವ ಕ್ಷೇತ್ರ ಇದಾಗಿದೆ. ಶ್ರೀ ಗುಂಜಾನರಸಿಂಹಸ್ವಾಮಿ ದೇವಸ್ಥಾನ ಮೆಟ್ಟಿಲುಗಳು ಮುಳುಗಡೆಯಾಗಿದೆ. ಮತ್ತಷ್ಟು ನೀರಿನ ಪ್ರಮಾಣ ಹೆಚ್ಚಾದಲ್ಲಿ ಪ್ರವಾಹ ಎದುರಾಗುವ ಸಾಧ್ಯತೆ ಇದೆ.