ಮೈಸೂರು: 2 ಸಾವಿರ ಕೊಟ್ಟು ಟಿಕೆಟ್ ಮಾಡಿಸಿ ನೇರ ದರ್ಶನ ಪಡೆದ ಭಕ್ತಾಧಿಗಳ ಭರ್ಜರಿ ರೆಸ್ಪಾನ್ಸ್ ಬಂದಿದೆ. ತಾಯಿಯ ನೇರ ದರ್ಶನ ಪಡೆದು ಭಕ್ತಾಧಿಗಳು ಖುಷಿ ಹಂಚಿಕೊಂಡರು. 2000 ಕೊಟ್ಟಿದ್ದಕ್ಕೂ ಸಾರ್ಥಕ ಒಳ್ಳೆಯ ದರ್ಶನ ಸಿಕ್ಕಿದೆ ಎಂದರು.
ಜಿಲ್ಲಾಡಳಿತ ಚೆನ್ನಾಗಿ ವ್ಯವಸ್ಥೆ ಮಾಡಿದೆ. ಈ ಬಾರಿ ಮೊದಲಿಗೆ ಈ ರೀತಿ ವಿನೂತನ ಪ್ರಯತ್ನ ಮಾಡಿರುವುದು ಸ್ವಾಗತಾರ್ಹ. 2 ಸಾವಿರ ಕೊಟ್ಟಿದ್ದಕ್ಕೂ ಒಳ್ಳೆಯ ದರ್ಶನ ಸಿಕ್ತು. ಚಾಮುಂಡೇಶ್ವರಿ ತಾಯಿಯ ವಿಗ್ರಹ ಕುಡಿಯುವ ನೀರು ಪ್ರಸಾದ ಎಲ್ಲವೂ ಸಿಕ್ಕಿದೆ ಎಂದು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಭಕ್ತಾದಿಗಳು ಧನ್ಯವಾದಗಳನ್ನ ತಿಳಿಸಿದರು.

