ಮೈಸೂರು : ಮೈಸೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 2 ಕೆಜಿ ಗಾಂಜಾ 7.30 ಲಕ್ಷ ನಗದು 10 ತಲ್ವಾರನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು‌ ದಾಳಿ ನಡೆಸಿದರು. ಮಾಲು ಸಮೇತ  ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಫೀರ್ಧೋಶ್, ರೋಷನ್ ಬಂಧಿತ ಆರೋಪಿಗಳು. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.