ತಿ. ನರಸೀಪುರ: ಭಾರತರತ್ನ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ 135 ನೇ ಜನ್ಮ ದಿನಾಚರಣೆ ಮಾಡಲಾಯಿತು. ಪಟ್ಟಣದ ತಾಲೂಕು ಕೇಂದ್ರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಯಿತು.

ಆಸ್ಪತ್ರೆ ಆಡಳಿತ ವೈದ್ಯಧಿಕಾರಿ ಡಾ.ಅಭಿಲಾಷ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಕುರಿತು ಡಾ. ಅಭಿಲಾಶ್ ಮಾತನಾಡಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರು ಮಹಾನ್ ಮಾನವತವಾದಿ ವಿಶ್ವದ ನಾಯಕ ನಮಗೆ ಸ್ವಾತಂತ್ರ್ಯ 1947ರಲ್ಲಿ ಬಂದರಾದರೂ 1949ರಲ್ಲಿ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಸರ್ವರಿಗೂ ಸಮಬಾಳು ಸಮಪಾಲು ಎಂಬಂತೆ ಸಂಪೂರ್ಣ ಸ್ವಾತಂತ್ರ್ಯ ದೊರಕುವಂತಾಯಿತು.

ಅವರು ಬಡ ಕುಟುಂಬದಲ್ಲಿ ಜನಿಸಿ ಅಸ್ಪೃಶ್ಯತೆ ಸೇರಿದಂತೆ ಹಲವು ನೋವುಗಳ ಅನುಭವಿಸಿ ಎಲ್ಲಾ ಶೋಷಿತ ಸಮುದಾಯಕ್ಕೆ ಅನುಕೂಲಕ್ಕಾಗಿ ಸಂವಿಧಾನ ನೀಡಿದ್ದರಿಂದ ನಾವೆಲ್ಲ ಉನ್ನತ ಮಟ್ಟದ ಅಧಿಕಾರಿಗಳಾಗಿ ಇದ್ದೇವೆ. ಅದಕ್ಕೆ ಮುಖ್ಯ ಕಾರಣ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ನೀಡಿರುವ ಸಂವಿಧಾನ ಎಂದರು. ಇದೇ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಗೌರವಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.