ರಿಲಯನ್ಸ್​ ಜಿಯೋ ಸೇರಿ ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್​ ಬೆಲೆಯನ್ನು ಏರಿಸಿದೆ. ಬೆಲೆ ಏರಿಕೆಯ ಬಿಸಿಯಿಂದ ಬಳಕೆದಾರರು ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್​ನತ್ತ ಮುಖ ಮಾಡಿದ್ದಾರೆ. ಮಾತ್ರವಲ್ಲದೆ ಉತ್ತಮ ರೀಚಾರ್ಜ್​ಗಳನ್ನು ಆಯ್ಕೆ ಮಾಡುವ ಮೂಲಕ ರೀಚಾರ್ಜ್​ ಮಾಡುತ್ತಿದ್ದಾರೆ.

ಟೆಲಿಕಾಂ ಖಾಸಗಿ ಕಂಪನಿಗಳ ಬೆಲೆ ಏರಿಕೆಯಿಂದ ಬಿಎಸ್​​ಎನ್​ಎಲ್​ 229 ರೂಪಾಯಿಯ ಪ್ರಿಪೇಯ್ಡ್​ ರೀಚಾರ್ಜ್​ ಪ್ಲಾನ್ ಭಾರೀ ಜನಪ್ರಿಯತೆ ಪಡೆಯುತ್ತಿದೆ. ಇದರ ಮೂಲಕ 30 ದಿನಗಳವರೆಗೆ ಬಳಕೆದಾರರು ಯಾವುದೇ ನೆಟ್​ವರ್ಕ್​ಗೆ ಉಚಿತ ಕರೆ ಮಾಡಬಹುದಾಗಿದೆ.

ಬಿಎಸ್​​ಎನ್​ಎಲ್​ 229 ರೀಚಾರ್ಜ್​ ಪ್ಲಾನ್​ ಮೂಲಕ ಅನಿಯಮಿತ ಮತ್ತು ಸ್ಥಳೀಯ ಕರೆಗಳನ್ನು ಉಚಿತವಾಗಿ ನೀಡುತ್ತದೆ. ಜೊತೆಗೆ ಡೇಟಾ ಪ್ರಯೋಜನ ಕೂಡ ಇದರಲ್ಲಿದೆ. ಈ ಯೋಜನೆಯನ್ನು ಅಳವಡಿಸಿಕೊಂಡವರು 60ಜಿಬಿ ಡೇಟಾ ಪಡೆಯುತ್ತಾರೆ. ಅಂದರೆ ಪ್ರತಿದಿನ 2ಜಿಬಿ ಡೇಟಾ ಒದಗಿಸುತ್ತದೆ. ಪ್ರತಿದಿನ 100 ಎಸ್​ಎಮ್​ಎಸ್​ ಉಚಿತವಾಗಿ ಸಿಗುತ್ತದೆ.